ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪಶ್ಚಿಮ ವಿಭಾಗದ ಪೊಲೀಸರು ಮುಂದುವರೆಸಿದ್ದು, ಆರೋಪಿಗಳು ಅಳಿಸಿ ಹಾಕಿರುವ ದತ್ತಾಂಶವನ್ನು ಮರು ಸಂಗ್ರಹ (ರಿಟ್ರಿವ್) ಕಾರ್ಯದಲ್ಲಿ ತೊಡಗಿದ್ದಾರೆ.
ಆರೋಪಿಗಳು ತಮ್ಮ ಮೊಬೈಲ್, ಕೃತ್ಯ ನಡೆದ ಸ್ಥಳ ಹಾಗೂ ರೆಸ್ಟೋರೆಂಟ್‌ನಲ್ಲಿದ್ದ ಸಿಸಿ ಟಿ.ವಿ ಕ್ಯಾಮೆರಾ ಡಿವಿಆರ್‌ನಲ್ಲಿದ್ದ ದೃಶ್ಯಾವಳಿಯನ್ನು ಆರೋಪಿಗಳು ಅಳಿಸಿ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.
‘ಕೆಲವು ಆರೋಪಿಗಳಿಂದ ಐಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಒಂದು ಐಫೋನ್‌ನಲ್ಲಿ ನಾಲ್ಕರಿಂದ ಐದು ಸೆಕೆಂಡ್ ವಿಡಿಯೊ ಇತ್ತು. ಅದು ಈ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯ ಆಗುತ್ತಿತ್ತು. ಅದೇ ವಿಡಿಯೊವನ್ನೇ ಆರೋಪಿಗಳು ಅಳಿಸಿ ಹಾಕಿದ್ದಾರೆ. ಅದನ್ನು ಮರು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಆರೋಪಿಗಳು ಹಾಗೂ ಸಾಕ್ಷಿದಾರರಿಂದ ಜಪ್ತಿ ಮಾಡಲಾದ ಎಲ್ಲ ಮೊಬೈಲ್‌ಗಳನ್ನೂ ಹೈದರಾಬಾದ್‌ನ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಪ್ರದೋಷ್ ಕೃತ್ಯದ ಸಂದರ್ಭದಲ್ಲಿ ಬಳಸಿದ್ದ ಮೊಬೈಲ್ ನಂಬರ್ ಅವರು ಕೆಲಸ ಮಾಡುತ್ತಿದ್ದ ಕಂಪನಿಯಿಂದ ವಿತರಣೆ ಆಗಿತ್ತು. ಕಂಪನಿಯ ಅಧಿಕೃತ ಸಿಬ್ಬಂದಿಯನ್ನು ಕರೆಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.