ADVERTISEMENT

ಬೆಂಗಳೂರು: ಕೊನೊಕಾರ್ಪಸ್‌ ಸಸಿ ತೆಗೆಯಲು ಮನವಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 16:14 IST
Last Updated 12 ಜೂನ್ 2024, 16:14 IST
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊನೊಕಾರ್ಪಸ್‌ ಗಿಡಗಳನ್ನು ತೆರವು ಮಾಡಬೇಕು, ಇನ್ನು ಮುಂದೆ ನೆಡಬಾರದು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಹಸಿರು ಸೇನಾ ಪಡೆಯ ಪರಿಸರಮಂಜು ಹಾಗೂ ಕಿರಣ್‌ಕುಮಾರ್‌ ಮನವಿ ಸಲ್ಲಿಸಿದರು
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊನೊಕಾರ್ಪಸ್‌ ಗಿಡಗಳನ್ನು ತೆರವು ಮಾಡಬೇಕು, ಇನ್ನು ಮುಂದೆ ನೆಡಬಾರದು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೆ ಹಸಿರು ಸೇನಾ ಪಡೆಯ ಪರಿಸರಮಂಜು ಹಾಗೂ ಕಿರಣ್‌ಕುಮಾರ್‌ ಮನವಿ ಸಲ್ಲಿಸಿದರು   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನೆಡಲಾಗಿರುವ ಕೊನೊಕಾರ್ಪಸ್‌ ಗಿಡಗಳನ್ನು ಕೂಡಲೇ ತೆರವು ಮಾಡಬೇಕು. ಇನ್ನು ಮುಂದೆ ಆ ಗಿಡಗಳನ್ನು ನೆಡಬಾರದು ಎಂದು ಹಸಿರು ಸೇನಾ ಪಡೆ ಬಿಬಿಎಂಪಿಯ ಆಡಳಿತಗಾರ, ಮುಖ್ಯ ಆಯುಕ್ತ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮನವಿ ಮಾಡಿದೆ.

ನಗರದಲ್ಲಿ ರಸ್ತೆಗಳು, ಉದ್ಯಾನಗಳು ಸೇರಿದಂತೆ ಬಿಬಿಎಂಪಿಯೇ ಹಲವು ಕಡೆ ಕೊನೊಕಾರ್ಪಸ್‌ ಗಿಡಗಳನ್ನು ಬೆಳೆಸುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಪರಿಸರದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಕೊನೊಕಾರ್ಪಸ್‌ ಗಿಡಗಳನ್ನು ನೆಡಬಾರದು ಹಾಗೂ ನರ್ಸರಿಯಲ್ಲೂ ಉಳಿಸಿಕೊಳ್ಳಬಾರದು. ನೆಟ್ಟಿರುವ ಗಿಡಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹಸಿರು ಸೇನಾ ಪಡೆಯ ಪರಿಸರಪ್ರೇಮಿ ಮಂಜು ಮನವಿ ಮಾಡಿದರು.

‘ಪ್ರಜಾವಾಣಿ’ ಜೂನ್‌ 5ರಂದು ‘ಆರೋಗ್ಯಕ್ಕೆ ಮಾರಕವಾದ ‘ದುಬೈ ಗಿಡ’ ಶೀರ್ಷಿಕೆಯಡಿ ವರದಿ ಪ್ರಕಟಿಸಿ, ಕೊನೊಕಾರ್ಪಸ್‌ ಗಿಡಗಳು ಆರೋಗ್ಯದ ಮೇಲೆ ಉಂಟು ಮಾಡುವ ದುಷ್ಪರಿಣಾಮವನ್ನು ವಿವರಿಸಿತ್ತು. ಹಸಿರು ಸೇನಾ ಪಡೆ ಮನವಿಯೊಂದಿಗೆ ಈ ವರದಿಯನ್ನೂ ಲಗತ್ತಿಸಿದೆ.

ADVERTISEMENT

‘ಕೊನೊಕಾರ್ಪಸ್‌ ಗಿಡಗಳನ್ನು ಇನ್ನು ಮುಂದೆ ನೆಡುವುದಿಲ್ಲ, ನೆಟ್ಟಿರುವ ಗಿಡಗಳ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದರು’ ಎಂದು ಪರಿಸರಪ್ರೇಮಿ ಮಂಜು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.