ಬೆಂಗಳೂರು: ‘ದ್ವಿಚಕ್ರ ವಾಹನ ಮಾರಾಟಕ್ಕಿದೆ’ ಎಂಬುದಾಗಿ ಒಎಲ್‌ಎಕ್ಸ್ ಜಾಲತಾಣದಲ್ಲಿ ಪ್ರಕಟಗೊಂಡಿದ್ದ ಜಾಹೀರಾತು ನಂಬಿ ನಿವೃತ್ತ ಪೊಲೀಸ್ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ವೊಬ್ಬರು (ಎಎಸ್‌ಐ) ₹ 25 ಸಾವಿರ ಕಳೆದುಕೊಂಡಿದ್ದಾರೆ.
‘ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ನಿವೃತ್ತ ಎಎಸ್‌ಐ ಅವರು ವಂಚನೆ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿ ವಿಕಾಸ್ ಪಾಟೀಲ, ದ್ವಿಚಕ್ರ ವಾಹನ ಮಾರಾಟಕ್ಕಿರುವುದಾಗಿ ಜಾಹೀರಾತು ನೀಡಿದ್ದ. ದೂರುದಾರರು ಆತನನ್ನು ಸಂಪರ್ಕಿಸಿದ್ದರು. ಮುಂಗಡವಾಗಿ ಖಾತೆಗೆ ₹ 25,000 ವರ್ಗಾಯಿಸಿಕೊಂಡಿದ್ದ ಆರೋಪಿ, ದ್ವಿಚಕ್ರ ವಾಹನ ನೀಡದೇ ನಾಪತ್ತೆಯಾಗಿದ್ದಾನೆ. ಒಎಲ್‌ಎಕ್ಸ್‌ನಲ್ಲಿ ನಕಲಿ ಖಾತೆ ತೆರೆದು ವಂಚನೆ ಮಾಡಿರುವ ಅನುಮಾನವಿದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.