ಬೆಂಗಳೂರು: ನಿಲ್ದಾಣಗಳ ಮಾಹಿತಿ, ಮಾರ್ಗಗಳ ವಿವರ, ಬಸ್‌ಗಳು ಬರುವ ಸಮಯ ಸೇರಿದಂತೆ ವಿವಿಧ ಮಾಹಿತಿಗಳನ್ನು ಒಳಗೊಂಡಪರಿಷ್ಕೃತಆಂಡ್ರಾಯ್ಡ್ ಮೊಬೈಲ್ ಆ್ಯಪ್ ಅನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬುಧವಾರ ಬಿಡುಗಡೆ ಮಾಡಿದೆ.
ತಾಂತ್ರಿಕ ದೋಷಗಳಿಂದಾಗಿ ಮೊಬೈಲ್ ಆ್ಯಪ್‌ಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿರಲಿಲ್ಲ. ಒಂದು ವರ್ಷದ ಬಳಿಕ ಆ್ಯಪ್‌ನ ಕೆಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.ನಿಹಾರ್ ಠಕ್ಕರ್ ಅಭಿವೃದ್ಧಿಪಡಿಸಿರುವ ಆ್ಯಪ್ ಅನ್ನು ನಿಗಮದ ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹಾಗೂ ಭದ್ರತಾ ವಿಭಾಗದ ನಿರ್ದೇಶಕ ಅನುಪಮ್ ಅಗರವಾಲ್ ಬಿಡುಗಡೆ ಮಾಡಿದರು.
ಗೂಗಲ್ ಪ್ಲೇ ಸ್ಟೋರ್‌ನಲ್ಲಿ'ಮೈ ಬಿಎಂಟಿಸಿ ಮೊಬೈಲ್ ಅಪ್ಲಿಕೇಶನ್' ಲಭ್ಯವಿದೆ. ಬಸ್ ನಿಲ್ದಾಣಗಳಿಗೆ ಬಸ್‌ಗಳು ಬರುವ ಅಂದಾಜು ಸಮಯ, ಪ್ರಯಾಣದ ನಕ್ಷೆ, ಹತ್ತಿರದ ನಿಲ್ದಾಣಗಳ ಮಾಹಿತಿ, ಮಾರ್ಗ ಆಧಾರಿತ ಹುಡುಕಾಟ ಹಾಗೂ ನೆಚ್ಚಿನ ಮಾರ್ಗಗಳು ಎಂಬ ಆಯ್ಕೆಗಳಿವೆ.ಈ ಆಯ್ಕೆಗಳು ಹಿಂದೆಯೂ ಇದ್ದವು. ಆದರೆ, ಪ್ರಯಾಣಿಕ ಸ್ನೇಹಿ ಆಗಿರಲಿಲ್ಲ ಎಂಬ ದೂರುಗಳಿದ್ದವು.
ಬಳಕೆದಾರರು ಒಂದು ನಿರ್ದಿಷ್ಟ ನಿಲುಗಡೆಗೆ ಒಂದಾಗ ಬಸ್‌ಗಳು ಬರುವ ಸಮಯವನ್ನು ತಿಳಿಸಲಿದೆ. ನಿಗದಿತ ಸ್ಥಳವನ್ನು ತಲುಪಿದಾಗ ಆ್ಯಪ್‌ನಿಂದ ಸಂದೇಶ ಬರಲಿದೆ.
‘ಆ್ಯಪ್ ಬಿಡುಗಡೆಗೂ ಮುನ್ನ ಅದರ ನಿಖರತೆ ಬಗ್ಗೆ ಹಲವು ಬಾರಿ ಪರಿಶೀಲನೆ ನಡೆಸಲಾಗಿದೆ. ಇನ್ನಷ್ಟು ಪರಿಷ್ಕರಣೆ ನಡೆಸುವ ಜತೆಗೆ ಹೊಸ ಆಯ್ಕೆಗಳನ್ನು ಮುಂದಿನ ದಿನಗಳಲ್ಲಿ ಸೇರಿಸಲಾಗುವುದು. ಬಸ್ ನಿಲ್ದಾಣಕ್ಕೆ ತಲುಪುವ ವೇಳೆ ಬಸ್‌ನಲ್ಲಿ ಎಷ್ಟು ಆಸನಗಳು ಲಭ್ಯ ಇವೆ ಎಂಬುದರ ಮಾಹಿತಿ ಕೂಡ ಪ್ರಯಾಣಿಕರಿಗೆ ಸಿಗುವಂತಾಗಬೇಕು. ಈ ಬಗ್ಗೆಯೂ ಪರಿಷ್ಕರಣೆ ಮಾಡಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.