ADVERTISEMENT

ಕ್ಯಾನ್ಸರ್ ಕುರಿತ ಜಾಗೃತಿಗಾಗಿ ಆ್ಯಪ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 8:34 IST
Last Updated 8 ಫೆಬ್ರುವರಿ 2024, 8:34 IST
<div class="paragraphs"><p>ರೈಸ್ ಅಗೇನಸ್ಟ್ ಕ್ಯಾನ್ಸರ್</p></div>

ರೈಸ್ ಅಗೇನಸ್ಟ್ ಕ್ಯಾನ್ಸರ್

   

ಬೆಂಗಳೂರು: ಕ್ಯಾನ್ಸರ್ ಕುರಿತ ಜಾಗೃತಿಗಾಗಿ ಸಂಪೂರ್ಣ ಮಾಹಿತಿಯುಳ್ಳ ಆ್ಯಪ್‌ವೊಂದನ್ನು ಇಂಡಿಯಾ ಕ್ಯಾನ್ಸರ್ ಸೊಸೈಟಿ (ಐಸಿಎಸ್) ಬಿಡುಗಡೆ ಮಾಡಿದೆ. ಇದಕ್ಕೆ ‘ರೈಸ್ ಅಗೇನಸ್ಟ್ ಕ್ಯಾನ್ಸರ್‌’ ಎಂದು ಹೆಸರಿಡಲಾಗಿದೆ.

ಕ್ಯಾನ್ಸರ್‌ ಅನ್ನು ಎದುರಿಸಲು ಜನರು ಮತ್ತು ಸಮುದಾಯಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಪ್ಲಿಕೇಶನ್ ಅನ್ನು ರೂಪಿಸಲಾಗಿದೆ. ಕ್ಯಾನ್ಸರ್‌ ಬಗ್ಗೆ ಮಾಹಿತಿ ಕೊರತೆ ನಿವಾರಿಸುವುದು, ಜಾಗೃತಿ ಮೂಡಿಸುವುದು ಮತ್ತು ಕ್ಯಾನ್ಸರ್‌ ಮುಕ್ತ ಭವಿಷ್ಯಕ್ಕೆ ಸಮುದಾಯಗಳನ್ನು ಸಂಘಟಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.

ADVERTISEMENT

‘ಭಾರತ ಮತ್ತು ವಿಶ್ವದಲ್ಲಿ ಲಕ್ಷಾಂತರ ಜನರ ಜೀವನದ ಮೇಲೆ ಕ್ಯಾನ್ಸರ್‌ ಪರಿಣಾಮ ಬೀರುತ್ತಿದೆ. ರೈಸ್ ಅಗೇನಸ್ಟ್ ಕ್ಯಾನ್ಸರ್‌ ಆ್ಯಪ್‌ ಅನ್ನು ಬಿಡುಗಡೆ ಮಾಡುವ ಮೂಲಕ ಐಸಿಎಸ್ ತೆಗೆದುಕೊಂಡಿರುವ ಈ ಕ್ರಮವು ಮೊಬೈಲ್ ತಂತ್ರಜ್ಞಾನದ ಅನುಕೂಲವನ್ನು ಬಳಸಿಕೊಂಡು, ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನವನ್ನು ಕ್ಯಾನ್ಸರ್‌ ಮತ್ತು ಅದರ ಕುಟುಂಬದಿಂದ ಬಾಧಿತರಾದವರಿಗೆ ಒದಗಿಸುತ್ತದೆ’ ಎಂದು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರಾಷ್ಟ್ರೀಯ ಮ್ಯಾನೇಜಿಂಗ್ ಟ್ರಸ್ಟೀ ಆಗಿರುವ ಉಷಾ ಥೋರಟ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.