ಬೆಂಗಳೂರು: ನಗರದ ಆರ್.ಕೆ.ಶ್ರೀಕಂಠನ್ ಟ್ರಸ್ಟ್ ವತಿಯಿಂದ ಜ.14ರಿಂದ 16ರ ತನಕ 27ನೇ ಸಂಕ್ರಾಂತಿ ಸಂಗೀತೋತ್ಸವ ಹಾಗೂ ಡಾ.ಆರ್.ಕೆ.ಶ್ರೀಕಂಠನ್ ಅವರ 103ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ಕೇರಳದ ತ್ರಿಶೂರ್ ವಿ. ರಾಮಚಂದ್ರನ್ ಅವರಿಗೆ ‘ಶ್ರೀಕಂಠಶಂಕರ’ ಹಾಗೂ ಶಿವಮೊಗ್ಗ ಜಿಲ್ಲೆ ಮತ್ತೂರಿನ ಅಕ್ಷರಾನಂದೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ‘ಶಂಕರಾದ್ವೈತ ತತ್ವಜ್ಞ’ ಬಿರುದು ಹಾಗೂ ಪ್ರಶಸ್ತಿ ನೀಡಿ ಜ. 14ರಂದು ಗೌರವಿಸಲಾಗುವುದು. ಬಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಹಾಗೂ ಪಾವಗಡ ಪ್ರಕಾಶ ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ತ್ರಿಶೂರ್ ವಿ. ರಾಮಚಂದ್ರನ್ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ ಎಂದು ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ರುದ್ರಪಟ್ಣಂ ಎಸ್. ರಮಾಕಾಂತ್ ತಿಳಿಸಿದ್ದಾರೆ.
ಮಲ್ಲೇಶ್ವರದ 14ನೇ ಕ್ರಾಸ್‌ನ ಸೇವಾ ಸದನದ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಜ. 15ರ ಭಾನುವಾರ ಅರುಣ್‌ಕುಮಾರ್, ಕೇರಳದ ವಾಮನ ನಂಬೂದಿರಿ, ಚೆನ್ನೈನ ನಿತ್ಯಾ ಹಾಗೂ ವಿದ್ಯಾ ಅವರ ಸಂಗೀತ ಕಾರ್ಯಕ್ರಮಗಳು ಮೆರುಗು ನೀಡಲಿವೆ. 16ರಂದು ಶಿವಮೊಗ್ಗ ಕುಮಾರಸ್ವಾಮಿ ಅವರ ಸ್ಯಾಕ್ಸಫೋನ್ ವಾದನ ಏರ್ಪಡಿಸಲಾಗಿದೆ. ಅದೇ ದಿನ ರಾಮ್‌ಪ್ರಸಾದ್ ಅವರಿಂದ ಹಾಡುಗಾರಿಕೆ ನಡೆಯಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.