ADVERTISEMENT

ಪೆಪ್ಪರ್‌ ಸ್ಪ್ರೇ ಬಳಸಿ ₹15 ಲಕ್ಷ ಲೂಟಿ: ಬಂಧನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 6:11 IST
Last Updated 16 ನವೆಂಬರ್ 2019, 6:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಸೆಕೆಂಡ್‌ ಹ್ಯಾಂಡ್‌ ಲ್ಯಾಪ್‌ಟಾಪ್‌ಗಳು ಮಾರಾಟಕ್ಕಿವೆ’ ಎಂದು ಜಾಹೀರಾತು ನೀಡಿಆಂಧ್ರಪ್ರದೇಶದ ಅಪ್ಪಲ್‌ ನಾಯ್ಡು ಹಾಗೂ ಭವಾನಿ ಎಂಬುವರನ್ನು ನಗರಕ್ಕೆ ಕರೆಸಿ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಹೊಡೆದು ₹15 ಲಕ್ಷ ದೋಚಿದ್ದ ಆರೋಪಿಗಳನ್ನು ಬಾಣಸ
ವಾಡಿ ಪೊಲೀಸರು ಬಂಧಿಸಿದ್ದಾರೆ.

‘ಕೆಮರೂನ್ ದೇಶದ ಇಯೊಂಗ್ ಲೂಯಿಸ್ ಬೆಟೆ (35) ಹಾಗೂ ಅಕ್ರೋಮನ್ ಬೆಟ್ರೋ ಜೇನ್ ಬ್ಯಾಪಿಸ್ಟ್ ಬಂಧಿತರು. ಅವರಿಂದ ₹ 2.50 ಲಕ್ಷ ನಗದು, 44.80 ಲಕ್ಷ ಮೌಲ್ಯದ ನಕಲಿ ಡಾಲರ್‌, ನಕಲಿ ನೋಟು ತಯಾರಿಸಲು ಬಳಸುವ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ತಿಳಿಸಿದರು.

‘ಅಪ್ಪಲ್‌ ನಾಯ್ಡು ಮೊಬೈಲ್‌ಗೆ ಸಂದೇಶ ಕಳುಹಿಸಿದ್ದ ಆರೋಪಿಗಳು ನಗರದ ಹೋಟೆಲ್‌ಗೆ ಕರೆಸಿಕೊಂಡಿದ್ದರು. ಅವರ ಜೊತೆ ಭವಾನಿ ಇದ್ದರು. ಇಬ್ಬರ ಮುಖಕ್ಕೆ ಪೆಪ್ಪರ್‌ ಸ್ಪ್ರೇ ಹೊಡೆದು ಹಣ ಕದ್ದುಒಯ್ದಿದ್ದಾರೆ’ ಎಂದು ಹೇಳಿದರು.

ADVERTISEMENT

ಹಲ್ಲೆ; ಬಂಧನ

ಬೆಂಗಳೂರು: ಗುರಾಯಿಸಿ ನೋಡಿದರೆಂಬ ಕಾರಣಕ್ಕೆ ಆಟೊ ಚಾಲಕ ಸತೀಶ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿದ್ದು, ಆ ಸಂಬಂಧ ನಾಲ್ವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

‘ತೀವ್ರ ಗಾಯಗೊಂಡಿರುವ ಸತೀಶ್ ಅವರು ಗಿರಿನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿರುವ ದೂರು ಆಧರಿಸಿ ಜೋಗಯ್ಯ, ಪುನಿತ್, ವಿಕ್ಕಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ವಿಷ ಕುಡಿದು ದಂಪತಿ ಆತ್ಮಹತ್ಯೆ

ಬೆಂಗಳೂರು: ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಮೋಹನ್ (60) ಹಾಗೂ ಅವರ ಪತ್ನಿ ನಿರ್ಮಲಾ (54) ಎಂಬುವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಮಂಜುನಾಥ್ ನಗರದಲ್ಲಿ ದಂಪತಿ ವಾಸವಿದ್ದರು. ಅವರ ಪಕ್ಕದ ಮನೆಯಲ್ಲಿ ಮಗ ಹಾಗೂ ಸೊಸೆ ನೆಲೆಸಿದ್ದರು. ಮನೆಯ ಕೊಠಡಿಯಲ್ಲೇ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಘಟನಾ ಸ್ಥಳದಲ್ಲಿ ಮರಣ ಪತ್ರ ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.

‘ಗುರುವಾರ ರಾತ್ರಿ ಒಟ್ಟಿಗೆ ವಿಷ ಕುಡಿದಿರುವ ದಂಪತಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ‘ಸ್ನೇಹಿತ ಮನೋಹರ್ ಎಂಬಾತ ನಿರ್ಮಲಾ ಅವರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಅದು ಮೋಹನ್ ಅವರಿಗೂ ಗೊತ್ತಾಗಿತ್ತು. ಎಚ್ಚರಿಕೆ ನೀಡಿದರೂ ಮನೋಹರ್ ಸುಮ್ಮನಾಗಿರಲಿಲ್ಲ. ಅದರಿಂದ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಷಯವನ್ನೇ ಮರಣಪತ್ರದಲ್ಲಿ ಬರೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮನೋಹರ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತ ತಲೆಮರೆಸಿಕೊಂಡಿದ್ದಾನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.