ADVERTISEMENT

ಸಿಗರೇಟ್‌ ವಿತರಕನ ಹಿಂಬಾಲಿಸಿ ₹15 ಲಕ್ಷ ಸುಲಿಗೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2024, 15:47 IST
Last Updated 2 ಫೆಬ್ರುವರಿ 2024, 15:47 IST
ಸಿಗರೇಟ್‌
ಸಿಗರೇಟ್‌   

ಬೆಂಗಳೂರು: ನಗರದ ಮಳಿಗೆಗಳಿಗೆ ಸಿಗರೇಟ್ ಸರಬರಾಜು ಮಾಡುವ ವಿತರಕನನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳ ತಂಡ, ಪಿಸ್ತೂಲ್ ತೋರಿಸಿ ಕಣ್ಣಿಗೆ ಖಾರದ ಪುಡಿ ಎರಚಿ ₹15 ಲಕ್ಷ ಸುಲಿಗೆ ಮಾಡಿದೆ.

ನಾಗರಬಾವಿ ಬಳಿಯ ಪಾಪರೆಡ್ಡಿ ಪಾಳ್ಯದಲ್ಲಿ ನಡೆದಿರುವ ಸುಲಿಗೆ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಿತರಕ ಗೋಪಾಲ್, ಟಾಟಾ ಏಸ್‌ ವಾಹನದಲ್ಲಿ ಸಿಗರೇಟ್ ಬಾಕ್ಸ್‌ಗಳನ್ನು ಇಟ್ಟುಕೊಂಡು ಮಳಿಗೆಗಳಿಗೆ ಕೊಡಲು ಹೊರಟಿದ್ದರು. ಸಿಗರೇಟ್‌ ಕೊಟ್ಟ ನಂತರ ಹಣವನ್ನೂ ಸಂಗ್ರಹಿಸಿಟ್ಟುಕೊಂಡಿದ್ದರು. ಕೆಂಗೇರಿಯಿಂದ ಪಾಪರೆಡ್ಡಿ ಪಾಳ್ಯದತ್ತ ಬಂದಿದ್ದರು. ಅವರನ್ನು ಆರೋಪಿಗಳು ಹಿಂಬಾಲಿಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ವಾಹನ ಅಡ್ಡಗಟ್ಟಿದ್ದ ಆರೋಪಿಗಳು, ಪಿಸ್ತೂಲ್ ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದರು. ನಂತರ, ಕಣ್ಣಿಗೆ ಖಾರದ ಪುಡಿ ಎರಚಿದ್ದರು. ಗೋಪಾಲ್‌ ಅವರನ್ನು ಅಟ್ಟಾಡಿಸಿದ್ದ ಆರೋಪಿಗಳು, ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.