ADVERTISEMENT

ಹೋಟೆಲ್‌ನಲ್ಲಿ ರೊಬೊಟ್‌ ಕನ್ಯಾಮಣಿಯರು

ಬೆಂಗಳೂರಿನ ಮೊದಲ ರೊಬೊಟ್ ರೆಸ್ಟೊರೆಂಟ್ ಇಂದಿರಾನಗರದಲ್ಲಿ ಆರಂಭ

ರಶೀದ್ ಕಪ್ಪನ್
Published 17 ಆಗಸ್ಟ್ 2019, 19:45 IST
Last Updated 17 ಆಗಸ್ಟ್ 2019, 19:45 IST
ರೆಸ್ಟೊರೆಂಟ್‌ನಲ್ಲಿರುವ ರೊಬೊಟ್ ಸಪ್ಲೆಯರ್ –ಪ್ರಜಾವಾಣಿ ಚಿತ್ರ
ರೆಸ್ಟೊರೆಂಟ್‌ನಲ್ಲಿರುವ ರೊಬೊಟ್ ಸಪ್ಲೆಯರ್ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನೀವು ಈ ಹೋಟೆಲ್‌ಗೆ ಹೋಗಿ ಕುಳಿತು ಆರ್ಡರ್ ಮಾಡಿದರೆ ಸಾಕು, ನಿಮಗೆ ಆಹಾರ ಪೂರೈಸಲು ಐವರು ರೊಬೊಟಿಕ್ ಕನ್ಯಾಮಣಿಯರು ಸಜ್ಜಾಗಿ ನಿಂತಿರುತ್ತಾರೆ. ಸುಮಧುರ ಕಂಠದಲ್ಲಿ ಮಾತನಾಡುತ್ತಾ ಅವರು ನಿಮಗೆ ಇಂಡೋ ಏಷ್ಯಾ ತಿನಿಸುಗಳನ್ನು ಪೂರೈಸುತ್ತಾರೆ.

ಇಂದಿರಾನಗರದಲ್ಲಿ ಹೈಟೆಕ್ ರೊಬೊಟಿಕ್ ರೆಸ್ಟೊರೆಂಟ್‌ ಶನಿವಾರ ಉದ್ಘಾಟನೆಗೊಂಡಿದ್ದು, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲೂ ರೊಬೊಟಿಕ್ ಸಪ್ಲೈಯರ್‌ಗಳು ಕಾಣಬಹುದಾಗಿದೆ. ಶಿಸ್ತಿನಿಂದ ಹೇಗೆ ವರ್ತಿಸಬೇಕು, ಯಾರಿಗೆ ಹಾಗೂ ಯಾವ ಸ್ಥಳಕ್ಕೆ ನಿಖರವಾಗಿ ಆಹಾರ ಪೂರೈಕೆ ಮಾಡಬೇಕು ಎಂಬುದು ಇವು
ಗಳಿಗೆ ಚೆನ್ನಾಗಿ ಗೊತ್ತಿದೆ.

ಈ ರೆಸ್ಟೊರೆಂಟ್‌ನಲ್ಲಿ ಡಿಜಿಟಲ್ ಟೇಬಲ್‌ಗಳಿದ್ದು, ಅದರಲ್ಲಿ ಸಣ್ಣ ಕಂಪ್ಯೂಟರ್‌ಗಳನ್ನು (ಟ್ಯಾಬ್‌) ಜೋಡಿ
ಸಲಾಗಿದೆ. ಯಾವ ಆಹಾರಬೇಕು ಎಂಬುದನ್ನು ಅದರಲ್ಲಿ ಗುರುತಿಸಿ ಕಾದರೆ ಸಾಕು. ಅಡುಗೆ ಮನೆಯಿಂದ ಚೆನ್ನಾಗಿ ಜೋಡಿಸಿಟ್ಟ ಆಹಾರದ ತಟ್ಟೆಯೊಂದಿಗೆ ಈ ರೊಬೊಟ್‌ಗಳು ನಿರ್ದಿಷ್ಟ ಟೇಬಲ್‌ ಬಳಿಯೇ ಬಂದು ನಿಲ್ಲುತ್ತವೆ.

ADVERTISEMENT

ರೊಬೊಟ್ ರೆಸ್ಟೊರೆಂಟ್ ಸಂಸ್ಥಾಪಕ ವೆಂಕಟೇಶ್‌ ರಾಜೇಂದ್ರನ್, 2017ರಲ್ಲಿ ‌ಚೆನ್ನೈ ಮತ್ತು ಕೊಯಮತ್ತೂರಿ
ನಲ್ಲಿ ರೊಬೊಟ್ ರೆಸ್ಟೊರೆಂಟ್ ಆರಂಭಿಸಿದ್ದರು. ಇದೇರೀತಿ ಬೆಂಗಳೂರಿನಲ್ಲೂ ರೆಸ್ಟೊರೆಂಟ್ ಆರಂಭಿಸಿರುವ ಅವರು ಇಲ್ಲೂ ಯಶೋಗಾಥೆ ಮುಂದುವರಿಸುವ ವಿಶ್ವಾಸ ಹೊಂದಿದ್ದಾರೆ.

ಹೆಚ್ಚಿನ ಮಾಹಿತಿಗೆ:www.robotrestaurant.in ನೋಡಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.