ADVERTISEMENT

ನಾಳೆ ‘ರನ್‌ ಫಾರ್‌ ರೀಸರ್ಚ್‌’

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 18:31 IST
Last Updated 28 ಜೂನ್ 2024, 18:31 IST

ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ ಜೂನ್‌ 30ರಂದು ಬೆಳಿಗ್ಗೆ 5ರಿಂದ 9ರವರೆಗೆ ‘ರನ್‌ ಫಾರ್‌ ರೀಸರ್ಚ್‌’ ಹಮ್ಮಿಕೊಂಡಿದೆ. 

ಇದರಲ್ಲಿ 3ಕೆ, 5ಕೆ ಮತ್ತು 10ಕೆ ವಿಭಾಗಗಳಿದ್ದು ಫಿಟ್‌ನೆಸ್‌ ಪ್ರಿಯರಿಗೆ ಭಾಗವಹಿಸಲು ಅವಕಾಶ ನೀಡುತ್ತಿದೆ. ಆರೋಗ್ಯ ಕಾಳಜಿಯನ್ನು ಬೆಳೆಸಿಕೊಳ್ಳುವತ್ತ ಜನರನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. 

ಇಂಡಿಯನ್ ಸೊಸೈಟಿ ಫಾರ್ ಕ್ಲಿನಿಕಲ್ ರೀಸರ್ಚ್ ಅಧ್ಯಕ್ಷ ಡಾ.ಸನಿಶ್ ಡೇವಿಸ್, ‘ಕ್ಲಿನಿಕಲ್ ರೀಸರ್ಚ್ ರೋಗಿಗಳಿಗೆ ಹೊಸ ಚಿಕಿತ್ಸೆಗಳನ್ನು ತರುವಲ್ಲಿ ಅತ್ಯಂತ ಮುಖ್ಯವಾಗಿದೆ.  ಕಠಿಣ ಪರೀಕ್ಷೆಗಳಿಲ್ಲದೆ ಹೊಸ ಔಷಧಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳನ್ನು ಸಮರ್ಪಕ ಬಳಕೆಯನ್ನು ಉತ್ತೇಜಿಸುತ್ತದೆ’ ಎಂದು ಹೇಳಿದರು. 

ADVERTISEMENT

ಕಾರ್ಯಕ್ರಮ ನಡೆಯುವ ಸ್ಥಳ:  ಎಚ್.ಎಸ್.ಆರ್. ಬಡಾವಣೆಯ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಿಂದ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.