ADVERTISEMENT

ಎಚ್‌ಡಿಕೆ ಅವಧಿಯಲ್ಲಿ ಬಮೂಲ್ ನೇಮಕಾತಿ: ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 7:14 IST
Last Updated 26 ಏಪ್ರಿಲ್ 2022, 7:14 IST

ಬೆಂಗಳೂರು: ಬಮೂಲ್‌ ನೇಮಕಾತಿ ನಡೆದಾಗ ಜೆಡಿಎಸ್‌–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇತ್ತು. ಅಕ್ರಮ ನಡೆದಿದ್ದರೆ ಅವರ ಅವಧಿಯಲ್ಲೇ ನಡೆದಿರಬೇಕು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಎಚ್‌.ಡಿ.ಕುಮಾರಸ್ವಾಮಿ ಅವರು ಬಮೂಲ್‌ ನೇಮಕಾತಿಯಲ್ಲಿ ಎಲ್ಲ ಹದಿನಾಲ್ಕು ಯೂನಿಯನ್‌ಗಳಲ್ಲೂ ಅಕ್ರಮ ನಡೆದಿದೆ ಎಂದು ದೂರು ಕೊಟ್ಟಿದ್ದಾರೆ. ಎಲ್ಲ ಕಡೆ ಅಕ್ರಮದ ದೂರು ನೀಡಿದರೆ ಹೇಗೆ’ ಎಂದು ಲೇವಡಿ ಮಾಡಿದರು.

ಮೈತ್ರಿ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಸಹೋದರ ಎಚ್‌.ಡಿ.ರೇವಣ್ಣ ಕೆಎಂಎಫ್‌ ಅಧ್ಯಕ್ಷರಾಗಿದ್ದರು. ಬಂಡೆಪ್ಪ ಕಾಶೆಂಪೂರ ಅವರು ಸಹಕಾರ ಸಚಿವರಾಗಿದ್ದರು. ಆರೋಪ ಮಾಡಬೇಕಾದರೆ ದಾಖಲೆ ಇಟ್ಟು ಮಾಡಬೇಕು. ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಅಕ್ರಮ ನಡೆದಿರಬೇಕು
ಎಂದರು.

ADVERTISEMENT

‘ನಾವು ಅಧಿಕಾರಕ್ಕೆ ಬಂದ ಮೇಲೆ ಕೊರೊನಾ ಸಂದರ್ಭದಲ್ಲೇ ಐದು ಸಾವಿರ ಹುದ್ದೆಗಳ ನೇಮಕಾತಿ ಘೋಷಣೆ ಮಾಡಿದ್ದೆ. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಂಸದ ಡಿ.ಕೆ.ಸುರೇಶ್‌ ದೂರು ಕೊಟ್ಟಿದ್ದರು. ಇದರ ತನಿಖೆಗೆ ಒಬ್ಬ ಅಧಿಕಾರಿಯನ್ನು ನೇಮಿಸಿದ್ದೆವು. ಈ ಅಧಿಕಾರಿ ಈಗಾಗಲೇ ವರದಿ ನೀಡಿದ್ದಾರೆ’ ಎಂದು ಸೋಮಶೇಖರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.