ಬೆಂಗಳೂರು: ಸದಾಶಿವನಗರ ಪ್ರತಿಷ್ಠಿತ ವಸತಿ ಬಡಾವಣೆಯ ಖ್ಯಾತಿಯೊಂದಿಗೆ ನಗರದ ಅತಿ ಹೆಚ್ಚಿನ ‘ಮೌಲ್ಯ’ದ ಪ್ರದೇಶವಾಗಿದೆ. ಎಂ.ಜಿ. ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆಗಳನ್ನು ಮೀರಿಸಿರುವ ಜಯನಗರ ಅತಿಬೆಲೆಬಾಳುವ ‘ವಾಣಿಜ್ಯ ಪ್ರದೇಶ’ದ ಸ್ಥಾನ ಅಲಂಕರಿಸಿದೆ.
ಅ.3ರಿಂದ ಜಾರಿಗೊಂಡಿರುವ ಸ್ವತ್ತುಗಳ ಪರಿಷ್ಕೃತ ಮಾರ್ಗಸೂಚಿ ದರದಂತೆ ಸದಾಶಿವನಗರದಲ್ಲಿ ವಸತಿ ಪ್ರದೇಶದ ಮೌಲ್ಯ ಅತ್ಯಧಿಕವಾಗಿದೆ.
ಸದಾಶಿವನಗರದ ಸ್ಯಾಂಕಿ ರಸ್ತೆಯ ಸ್ವತ್ತುಗಳ ದರ ಪ್ರತಿ ಚದರ ಮೀಟರ್‌ಗೆ ₹3.02 ಲಕ್ಷವಾಗಿದೆ. ಅಚ್ಚಯ್ಯ ಶೆಟ್ಟಿ ಬಡಾವಣೆಯಲ್ಲಿ ಪ್ರತಿ ಚದರ ಮೀಟರ್‌ಗೆ ₹2.96 ಲಕ್ಷವಾಗಿದ್ದು, ಈ ಪ್ರದೇಶದ ಪ್ಯಾಲೇಸ್ ಲೋವರ್ ಆರ್ಚರ್ಡ್ಸ್‌ನಲ್ಲಿ ಪ್ರತಿ ಚ.ಮೀಗೆ ₹1.43 ಲಕ್ಷ ದರ ನಿಗದಿಯಾಗಿದೆ. ಜಯನಗರ 4ನೇ ಬ್ಲಾಕ್‌ನ 11ನೇ ಮುಖ್ಯರಸ್ತೆಯಲ್ಲಿರುವ ಸ್ವತ್ತುಗಳಿಗೆ ಪ್ರತಿ ಚ.ಮೀಗೆ ₹2.76 ಲಕ್ಷ ನಿಗದಿಯಾಗಿದ್ದು, ಈ ಭಾಗದಲ್ಲಿ ಇದು ಅಧಿಕವಾಗಿದೆ.
ಜಯನಗರದ ಕಾಸ್ಮೊಪಾಲಿಟನ್ ಕ್ಲಬ್ ವೃತ್ತದಿಂದ 11ನೇ ಮುಖ್ಯರಸ್ತೆಯವರೆಗಿನ ವಾಣಿಜ್ಯ ನಿವೇಶನಗಳ ಮಾರ್ಗಸೂಚಿ ದರ ಪ್ರತಿ ಚ.ಮೀಗೆ ₹5.36 ಲಕ್ಷವಾಗಿದ್ದು, ಇದು ನಗರ ಜಿಲ್ಲೆಯಲ್ಲೇ ಅತಿಹೆಚ್ಚಾಗಿದೆ. ಜಯನಗರದ 27ನೇ ಅಡ್ಡರಸ್ತೆ ಹಾಗೂ 30ನೇ ಅಡ್ಡರಸ್ತೆಯಲ್ಲಿ ₹5.03 ಲಕ್ಷವಾಗಿದೆ. 9, 10, ನೇ ಮುಖ್ಯರಸ್ತೆ, 33, 36, 46ನೇ ಅಡ್ಡರಸ್ತೆ, 100 ಅಡಿ ರಸ್ತೆ, ಸೌತ್ ಎಂಡ್ ಸೇರಿದಂತೆ ಈ ಸುತ್ತಮುತ್ತಲಿನ ವಾಣಿಜ್ಯ ನಿವೇಶನಗಳ ದರ ₹4.65 ಲಕ್ಷದಿಂದ ₹3.65 ಲಕ್ಷದವರೆಗೆ ಇದೆ.
ನಗರದ ಪ್ರತಿಷ್ಠಿತ ವಾಣಿಜ್ಯ ಕೇಂದ್ರಗಳಾದ ಕನ್ನಿಂಗ್ ಹ್ಯಾಂ ರಸ್ತೆಯ ವಾಣಿಜ್ಯ ನಿವೇಶನಗಳಿಗೆ ಪ್ರತಿ ಚ.ಮೀಗೆ ₹3.62 ಲಕ್ಷ ನಿಗದಿಯಾಗಿದ್ದು, ಕಸ್ತೂರಬಾ ರಸ್ತೆಯಿಂದ ಟ್ರಿನಿಟಿ ವೃತ್ತದವರೆಗಿನ ಎಂ.ಜಿ. ರಸ್ತೆಯ ವಾಣಿಜ್ಯ ನಿವೇಶನಗಳಿಗೆ ₹3.15 ಲಕ್ಷವಾಗಿದೆ. ಈ ಎರಡೂ ಪ್ರದೇಶಗಳ ಮೌಲ್ಯವನ್ನು ಮೀರಿರುವ ಜಯನಗರ ಅತಿ ಹೆಚ್ಚಿನ ಮೌಲ್ಯದ ‘ವಾಣಿಜ್ಯ ಪ್ರದೇಶ’ವಾಗಿದೆ.
ಮಹದೇವಪುರ, ಕೆ.ಆರ್. ಪುರ, ವರ್ತೂರು ಪ್ರದೇಶಗಳಲ್ಲಿ ವಸತಿ ಹಾಗೂ ವಾಣಿಜ್ಯ ಪ್ರದೇಶಗಳ ಮಾರ್ಗಸೂಚಿ ದರದಲ್ಲಿ ಸಾಕಷ್ಟು ಹೆಚ್ಚಳವಾಗಿದ್ದು, ಮೌಲ್ಯವೂ ವೃದ್ದಿಯಾಗಿದೆ. ಇದರ ಜೊತೆಗೆ ಕೃಷಿ ಭೂಮಿಗಳಿಗೆ ಎಕರೆಗೆ ಕೋಟ್ಯಂತರ ರೂಪಾಯಿಗಳ ಮಾರ್ಗಸೂಚಿ ದರವೇ ನಿಗದಿಯಾಗಿದೆ. ಮಹದೇವಪುರದ ದೊಡ್ಡನೆಕ್ಕುಂದಿ ವರ್ತುಲ ರಸ್ತೆಗೆ ಹೊಂದಿಕೊಂಡಂತಿರುವ ಕೃಷಿ ಭೂಮಿಗೆ ಎಕರೆಗೆ ₹13 ಕೋಟಿ ನಿಗದಿಪಡಿಸಲಾಗಿದೆ.
ಅಪಾರ್ಟ್‌ಮೆಂಟ್ ಹಾಗೂ ವಿಲ್ಲಾಗಳಿಗೆ ಪ್ರತ್ಯೇಕ ವರ್ಗದಲ್ಲಿ ಮಾರ್ಗಸೂಚಿ ದರ ನಿಗದಿ ಮಾಡಲಾಗಿದೆ. ಗಾಂಧಿನಗರದಲ್ಲಿ ಚದರ ಮೀಟರ್‌ಗೆ ₹2.86 ಲಕ್ಷ, ಸದಾಶಿವನಗರದಲ್ಲಿ ₹2.06 ಲಕ್ಷ, ಜಯನಗರದಲ್ಲಿ ₹1.33 ಲಕ್ಷವಾಗಿದೆ. ಹೆಸರಘಟ್ಟ ಹಾಗೂ ವರ್ತೂರು ಪ್ರದೇಶದಲ್ಲಿ ವಿಲ್ಲಾಗಳ ವರ್ಗ ವಿಶೇಷವಾಗಿದ್ದು, ಪ್ರತಿ ಚ.ಮೀಗೆ ₹1 ಲಕ್ಷ ಮೀರಿದೆ.
ಶೇ 15ರಿಂದ 30ರಷ್ಟು ಹೆಚ್ಚಳ: ಐದು ವರ್ಷಗಳ ನಂತರ ಸರ್ಕಾರ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸಿದ್ದು, ಶೇ 15ರಿಂದ 30ರಷ್ಟು ಹೆಚ್ಚಳವಾಗಿದೆ. ವಸತಿ ನಿವೇಶನಗಳ ಮಾರ್ಗಸೂಚಿ ದರದಲ್ಲಿ ಶೇ 5ರಿಂದ 20ರಷ್ಟು, ಅಪಾರ್ಟ್‌ಮೆಂಟ್ ದರ ಶೇ 10ರಿಂದ 15, ವಿಲ್ಲಾಗಳ ದರ ಶೇ 10ರಿಂದ 20 ಹಾಗೂ ಕೃಷಿ ಭೂಮಿಯ ದರ ಶೇ 30ರಷ್ಟು ಹೆಚ್ಚಾಗಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳುತ್ತಾರೆ.
ವಸತಿ ಪ್ರದೇಶಗಳ ಮೌಲ್ಯ ಎಲ್ಲೆಲ್ಲಿ ಎಷ್ಟು ಅಧಿಕ?
(ಪ್ರತಿ ಚದರ ಮೀಟರ್‌ಗೆ)
ಸದಾಶಿವನಗರದ ಸ್ಯಾಂಕಿ ರಸ್ತೆ;₹3.02 ಲಕ್ಷ
ಒಟಿಸಿ ರಸ್ತೆ ಅವಿನ್ಯೂ– ನಗರ್ತರಪೇಟೆ ರಸ್ತೆ;₹2.84 ಲಕ್ಷ
ಜಯನಗರ 4ನೇ ಬ್ಲಾಕ್‌ನ 11ನೇ ಮುಖ್ಯರಸ್ತೆ;₹2.76 ಲಕ್ಷ
ಮಲ್ಲೇಶ್ವರ ಮಾರ್ಗೊಸಾ ರಸ್ತೆ, 15ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ ಜಂಕ್ಷನ್;₹2 ಲಕ್ಷ
ಹೊಸೂರು ರಸ್ತೆ;₹1.98 ಲಕ್ಷ
ಬನ್ನೇರುಘಟ್ಟ ಮುಖ್ಯರಸ್ತೆ;₹1.91 ಲಕ್ಷ
ರಾಜಾಜಿನಗರ ಡಾ. ರಾಜ್‌ಕುಮಾರ್ ರಸ್ತೆ;₹1.81 ಲಕ್ಷ
ಎಚ್‌ಎಸ್‌ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್ ರಸ್ತೆ;₹1.75 ಲಕ್ಷ
ರಾಜಾಜಿನಗರ ಬಾಷ್ಯಂ ವೃತ್ತ;₹1.75 ಲಕ್ಷ
ಬಸವನಗುಡಿ ಕನಕಪುರ ರಸ್ತೆ;₹1.66 ಲಕ್ಷ
ಆರ್‌ಪಿಸಿ ಲೇಔಟ್ 1ನೇ ಮುಖ್ಯರಸ್ತೆ;₹1.6 ಲಕ್ಷ
ಜೆ.ಪಿ. ನಗರ 15ನೇ ಅಡ್ಡರಸ್ತೆ;₹1.44 ಲಕ್ಷ
ಆರ್.ಆರ್. ನಗರ ಜಯಣ್ಣ ವೃತ್ತ;₹1.2 ಲಕ್ಷ
ನಾಗರಬಾವಿ ಹೊರ ವರ್ತುಲ ರಸ್ತೆ;₹90 ಸಾವಿರ
ಕೃಷಿ ಭೂಮಿ ಪ್ರತಿ ಎಕರೆಗೆ ಎಷ್ಟು ಮಾರ್ಗಸೂಚಿ ದರ?
ದೊಡ್ಡನೆಕ್ಕುಂದಿ ವರ್ತುಲ ರಸ್ತೆ ಸುತ್ತಮುತ್ತ;₹13 ಕೋಟಿ
ಮಹದೇವಪುರ ಹೊರವರ್ತುಲ ರಸ್ತೆ;₹12 ಕೋಟಿ
ಬೆನ್ನಿಗಾನಹಳ್ಳಿ ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತ;₹11.80 ಲಕ್ಷ
ಐಟಿಪಿಸಿಎಲ್;₹11 ಕೋಟಿ
ಕುಂದಲಹಳ್ಳಿ ಜಂಕ್ಷನ್‌ನಿಂದ ಐಟಿಪಿಎಲ್;₹10.21 ಕೋಟಿ
ಕನಕಪುರ ರಸ್ತೆ– ಸಾರಕ್ಕಿಯಿಂದ ಕೋಣನಕುಂಟೆ;₹9.99 ಕೋಟಿ
ಸರ್ಜಾಪುರ ರಸ್ತೆ;₹9.88 ಕೋಟಿ
ಬಿ. ನಾರಾಯಣಪುರ ಮುಖ್ಯರಸ್ತೆ;₹9.51 ಕೋಟಿ
ಕೃಷ್ಣರಾಜಪುರ ರಾಷ್ಟ್ರೀಯ ಹೆದ್ದಾರಿ;₹9.4 ಕೋಟಿ
ಹಗದೂರು/ ಹೂಡಿ;₹9 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.