ADVERTISEMENT

ಸಾಹಿತ್ಯ ಅಕಾಡೆಮಿ: 11ರಿಂದ ಅಕ್ಷರಗಳ ಹಬ್ಬ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2023, 19:58 IST
Last Updated 9 ಮಾರ್ಚ್ 2023, 19:58 IST

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಸಾಹಿತ್ಯೋತ್ಸವ ಹಾಗೂ ಅಕ್ಷರಗಳ ಹಬ್ಬ ಇದೇ 11ರಿಂದ 16ರವರೆಗೆ ನವದೆಹಲಿ ಯಲ್ಲಿ ನಡೆಯಲಿದೆ.

ಅಕಾಡೆಮಿಯ ಕಾರ್ಯದರ್ಶಿ ಕೆ.ಶ್ರೀನಿವಾಸ ರಾವ್‌ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಉತ್ಸವದಲ್ಲಿ 40 ಗೋಷ್ಠಿಗಳು ನಡೆಯಲಿವೆ. 60 ಭಾಷೆಗಳ 400ಕ್ಕೂ ಅಧಿಕ ಸಾಹಿತಿಗಳು, ವಿದ್ವಾಂಸರು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ಸಾಹಿತ್ಯ ಅಕಾಡೆಮಿಯ ಚಟುವಟಿಕೆಗಳು ಹಾಗೂ ಸಾಧನೆಗಳ ಕುರಿತು ಪ್ರದರ್ಶನವನ್ನು 11ರಂದು ಕೇಂದ್ರ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಉದ್ಘಾಟಿಸಲಿದ್ದಾರೆ. 11ರಂದು ಸಂಜೆ 5.30ಕ್ಕೆ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.