ಬೆಂಗಳೂರು: ಜನವರಿ 4ರಿಂದ 6ರವರೆಗೆ ಧಾರವಾಡದಲ್ಲಿ ನಡೆಯುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಹಾಕಲು ಆಸಕ್ತಿ ಇರುವವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದೇ 22ರಿಂದ ಡಿಸೆಂಬರ್ 20ರವರೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.
ಮೂರು ದಿನಗಳಿಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪುಸ್ತಕ ಮಳಿಗೆ ಹಾಕಬೇಕಾದಲ್ಲಿ ₹2500 ಬಾಡಿಗೆ ನಿಗದಿಪಡಿಸಿದೆ. ವಾಣಿಜ್ಯ ಮಳಿಗೆಗೆ ₹3 ಸಾವಿರ ನೀಡಬೇಕಿದೆ. ಬೆಂಗಳೂರಿನ ಸಾಹಿತ್ಯ ಪರಿಷತ್ತಿನಲ್ಲಿ ಅಥವಾ ಧಾರವಾಡದ ಸ್ವಾಗತ ಸಮಿತಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ವಿಳಾಸ: ಅಧ್ಯಕ್ಷರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಅಥವಾ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ, ಧಾರವಾಡ ಇಲ್ಲಿಗೆ ಡಿಡಿ ತೆಗೆದು ಕಳಿಸಬಹುದು. ಅಥವಾ ಧಾರವಾಡದ ಸಾಹಿತ್ಯ ಪರಿಷತ್ತಿನಲ್ಲಿ ನೇರವಾಗಿ ನಗದನ್ನು ನೀಡಬಹುದು.
ಮಳಿಗೆಗಳಿಗೆ ವಿದ್ಯುತ್, ಕುರ್ಚಿ, ಬೆಂಚುಗಳ ವ್ಯವಸ್ಥೆ ಇರಲಿದೆ. ಹೆಚ್ಚಿನ ಮಾಹಿತಿಗಾಗಿ: 9980807199ಗೆ ಸಂಪರ್ಕಿಸಬಹುದು.
ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಭಾಗವಹಿಸುವವರು ಕೂಡ ಡಿಸೆಂಬರ್ 20ರೊಳಗೆ ಕೇಂದ್ರ ಸಾಹಿತ್ಯ ಪರಿಷತ್ತಿನಲ್ಲಿ ₹250 ಶುಲ್ಕ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಅವಧಿ ಮೀರಿದ ಅರ್ಜಿ ಹಾಗೂ ಸಮ್ಮೇಳನದ ವೇಳೆ ಬಂದವರಿಗೆ ಆದ್ಯತೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.