ಬೆಂಗಳೂರು: ಚಿತ್ರರಂಗದ ಸಮಸ್ಯೆಗಳನ್ನು ಚರ್ಚಿಸಲೆಂದು ಗೋವಾಕ್ಕೆ ತೆರಳಿದ್ದ ಕನ್ನಡ ಚಲನಚಿತ್ರರಂಗದ ಕೆಲ ನಿರ್ಮಾಪಕರ ನಡುವೆ ಸೋಮವಾರ ರಾತ್ರಿ ಗಲಾಟೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡ ರಥಾವರ ಮಂಜುನಾಥ್, ಎ.ಗಣೇಶ್ ಮೊದಲಾದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
‘ಚಿತ್ರರಂಗದ 90ನೇ ವರ್ಷದ ಸಂಭ್ರಮದ ಕುರಿತು ಚರ್ಚಿಸಲು ಚಿತ್ರರಂಗದ ನಿಯೋಗ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ನೇತೃತ್ವದಲ್ಲಿ ಮೇ 27ರಂದು ಗೋವಾದ ರೆಸಾರ್ಟ್‌ಗೆ ತೆರಳಿತ್ತು. ಎನ್.ಎಂ.ಸುರೇಶ್ ಖಾಸಗಿಯಾಗಿ ನಮ್ಮನ್ನು ಕರೆದುಕೊಂಡು ಹೋಗಿದ್ದರು. ರಾತ್ರಿ ಪಾರ್ಟಿ ಮುಗಿಸಿ ಊಟ ಮಾಡುವ ಸಮಯದಲ್ಲಿ ನಿರ್ಮಾಪಕರಾದ ರಥಾವರ ಮಂಜು ಹಾಗೂ ಸತೀಶ್ ಆರ್ಯ ನಡುವೆ ಮಾತಿಗೆ ಮಾತು ಬೆಳೆಯಿತು. ಆಕ್ರೋಶಗೊಂಡ ಸತೀಶ್ ಆರ್ಯ ಊಟದ ತಟ್ಟೆಯಿಂದ ಮಂಜುನಾಥ್‌ಗೆ ಹೊಡೆದಿದ್ದಾರೆ. ಬಿಡಿಸಲು ಹೋಗಿದ್ದ ನನಗೆ, ಅಧ್ಯಕ್ಷ ಎನ್.ಎಂ.ಸುರೇಶ್‌ಗೂ ಏಟು ಬಿದ್ದಿದೆ’ ಎಂದು ನಿರ್ಮಾಪಕ ಎ.ಗಣೇಶ್ ಹೇಳಿದ್ದಾರೆ.
ಗಲಾಟೆಯ ನಂತರ ಸತೀಶ್ ಆರ್ಯ, ಎ.ಗಣೇಶ್ ಹಾಗೂ ರಥಾವರ ಮಂಜುನಾಥ್
ಅವರನ್ನು ಬೆಂಗಳೂರಿಗೆ ವಾಪಸ್ ಕಳುಹಿಸಲಾಗಿದೆ. ನಿಯೋಗದ ಸದಸ್ಯರು, ಪದಾಧಿಕಾರಿಗಳು ಬುಧವಾರ ಬೆಂಗಳೂರಿಗೆ ಮರಳಿದಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.