ಬೆಂಗಳೂರು: ಸ್ವಾಸ್ಥ ಟೆಕ್ನೋವೇಶನ್ಸ್ ಸಂಸ್ಥೆಯು ಎಂ.ಜಿ. ರಸ್ತೆ ಹಾಗೂ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಸ್ವಯಂಚಾಲಿತ ಡಿಜಿಟಲ್ ಸ್ಯಾನಿಟರಿ ಪ್ಯಾಡ್ ವಿತರಣಾ ಕಿಯೋಸ್ಕ್ ಯಂತ್ರಗಳನ್ನು ಸೋಮವಾರ ಸ್ಥಾಪಿಸಲಿದ್ದು, ಆ.2ರವರೆಗೆ ಮೂರು ದಿನಗಳು ಸ್ವಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ವಿತರಿಸುವುದಾಗಿ ಸಂಸ್ಥೆ ಘೋಷಿಸಿದೆ.
‘ಸ್ವಾಸ್ಥ ಸ್ತ್ರೀ’ ಹೆಸರಿನ ಕಿಯೋಸ್ಕ್‌ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಲಿದ್ದಾರೆ. ವಾರದ ಎಲ್ಲಾ ದಿನ 24 ಗಂಟೆಗಳೂ ಈ ಕಿಯೋಸ್ಕ್ ಯಂತ್ರಗಳು ಕಾರ್ಯನಿರ್ವಹಿಸಲಿವೆ. ಮೂರು ವಿಧದ ಪ್ಯಾಡ್‌ಗಳ ಆಯ್ಕೆಯ ಅವಕಾಶ ಇರಲಿದೆ. ಕ್ಯೂಆರ್ ಕೋಡ್ ಆಧಾರಿತ ಹಣ ಪಾವತಿಗೆ ಅವಕಾಶ ನೀಡಲಾಗಿದೆ. ಪ್ರಾರಂಭಿಕ ಕೊಡುಗೆಯಾಗಿ 4 ಸಾವಿರ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.
‘ಈ ಯಂತ್ರದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಪಡೆಯುವ ವಿಧಾನ ಸುಲಭವಾಗಿದ್ದು, ಒಂದು ಬಟನ್ ಒತ್ತಿದೊಡನೆ ಆಯ್ಕೆಗಳು ಯಂತ್ರದ ಪರದೆಯ ಮೇಲೆ ತೆರೆದುಕೊಳ್ಳುತ್ತವೆ. ಆರೋಗ್ಯ ವೃದ್ಧಿಗೆ ಕೈಗೆಟಕುವ ದರದಲ್ಲಿ ವೈದ್ಯಕೀಯ ಉತ್ಪನ್ನ ಒದಗಿಸುವುದು ನಮ್ಮ ಆದ್ಯತೆ’ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.