ಬೆಂಗಳೂರು: ಭಾರತೀಯ ಸೇನೆಯ ಹಳೆಯ ಎಂಜಿನಿಯರ್ ಗ್ರೂಪ್ ‘ಮದ್ರಾಸ್ ಸ್ಯಾಪರ್ಸ್’ನ 244ನೇ ಸ್ಥಾಪನಾ ದಿನ ಹಾಗೂ ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ನ.16ರಿಂದ ‘ಸಂಪರ್ಕ್ ಸೆ ಸಂಬಂಧ್–ಸಂಬಂಧ್ ಸೆ ಸಂಪರ್ಕ್’ ಇ–ಬೈಕ್ ರ‍್ಯಾಲಿ ಆರಂಭಿಸಲಿದೆ. ದಕ್ಷಿಣ ಭಾರತದಲ್ಲಿ ಸಂಚರಿಸಲಿರುವ ಈ ರ‍್ಯಾಲಿ ನ.22ರಂದು ಬೆಂಗಳೂರಿಗೆ ತಲುಪಲಿದೆ.
ಕನ್ಯಾಕುಮಾರಿ, ತಿರುವನಂತಪುರ, ಬೆಳಗಾವಿ ಮತ್ತು ಹೈದರಾಬಾದ್‌ನಿಂದ ಏಕಕಾಲಕ್ಕೆ ರ‍್ಯಾಲಿಗೆ ಚಾಲನೆ ದೊರೆಯಲಿದೆ. ಬೆಳಗಾವಿಯಿಂದ ಹೊರಡುವ ರ‍್ಯಾಲಿ ಹುಬ್ಬಳ್ಳಿ, ಮಂಗಳೂರು, ಹಾಸನ ಮೂಲಕ ಬೆಂಗಳೂರಿಗೆ ತಲುಪಲಿದೆ. ಮದ್ರಾಸ್ ಸ್ಯಾಪರ್ಸ್‌ಗೆ ಸಂಬಂಧಿಸಿದವರಲ್ಲದೇ ಇತರ ರೆಜಿಮೆಂಟ್‌ನ ಅವಲಂಬಿತರು ಈ ಕಾರ್ಯಕ್ರಮಗಳಲ್ಲಿ ‘ಸ್ಪರ್ಶ್’ ಆನ್‌ಲೈನ್ ಪೋರ್ಟಲ್ ಮೂಲಕ ಮನವಿ ಸಲ್ಲಿಸಿ ದಾಖಲಾತಿ ಮತ್ತು ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಕಂಡುಕೊಳ್ಳಬಹುದು. ರಕ್ಷಣಾ ಪಡೆಯ ನಿವೃತ್ತ ಅಧಿಕಾರಿಗಳು ಯೋಧರೊಂದಿಗೆ ಸಂಪರ್ಕ ಸಾಧಿಸಲು ಕೂಡ ಈ ಕಾರ್ಯಕ್ರಮ ಉಪಯೋಗವಾಗಲಿದೆ.
ಬೆಂಗಳೂರಿನಲ್ಲಿ ಎಂಜಿನಿಯರ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಅರವಿಂದ್ ವಾಲಿಯಾ ಧ್ವಜಾರೋಹಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.