ಬೆಂಗಳೂರು: ಸಂಕ್ರಾಂತಿ ಹಬ್ಬದ ಆಚರಣೆಗೆ ನಗರ ಸಜ್ಜಾಗಿದೆ. ಇಲ್ಲಿನ ವಿವಿಧ ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಕಬ್ಬು, ಗೆಣಸು ಹಾಗೂ ಅವರೆಕಾಯಿ ಖರೀದಿ ಭರಾಟೆ ಜೋರಾಗಿದೆ.
ಸಂಕ್ರಾಂತಿ ಹಬ್ಬ ಸೋಮವಾರವಿದ್ದು, ಎರಡು ದಿನ ಮೊದಲೇ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಕಪ್ಪು, ಕೆಂಪು ಬಣ್ಣದ ಕಬ್ಬುಗಳ ರಾಶಿ ಬಂದಿದೆ. ಕಬ್ಬಿನ ಜಲ್ಲೆ ತಲಾ ₹60ರಂತೆ ಮಾರಾಟ ಆಗುತ್ತಿದೆ. ನಗರದ ಪ್ರಮುಖ ಬಡಾವಣೆಗಳಲ್ಲೂ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸು ರಾಶಿ ಹಾಕಲಾಗಿದ್ದು, ಮಾರುಕಟ್ಟೆ ಕಳೆಗಟ್ಟಿದೆ.
ಕಡಲೆಕಾಯಿ ಮತ್ತಷ್ಟು ತುಟ್ಟಿಯಾಗಿದೆ. ಗುಣಮಟ್ಟದ ಕಡಲೆಕಾಯಿ ಕೆ.ಜಿ.ಗೆ ₹80 ಮತ್ತು ₹100ರಂತೆ ಮಾರಾಟವಾಗುತ್ತಿದೆ. ಗಾಂಧಿ ಬಜಾರ್, ಮಲ್ಲೇಶ್ವರ, ಜಯನಗರ, ಯಶವಂತಪುರ, ರಾಜಾಜಿನಗರ, ಮಡಿವಾಳ, ಚಾಮರಾಜಪೇಟೆ, ಚಿಕ್ಕಪೇಟೆಗಳಲ್ಲಿ ರಸ್ತೆಬದಿ ಹೆಚ್ಚುವರಿ ಮಳಿಗೆಗಳು ಆರಂಭವಾಗಿವೆ. ಎಳ್ಳು ಬೆಲ್ಲ ಮಿಶ್ರಿತ ಪೊಟ್ಟಣಗಳು, ಸಕ್ಕರೆ ಹಾಗೂ ಬೆಲ್ಲದ ಅಚ್ಚುಗಳನ್ನೂ ಮಾರಲಾಗುತ್ತಿದೆ.
ಎಳ್ಳು ಬೆಲ್ಲ ಮಿಶ್ರಿತ ಪೊಟ್ಟಣಗಳು ವಿವಿಧ ಗಾತ್ರಗಳಲ್ಲಿ ಲಭ್ಯ ಇವೆ. ಸಣ್ಣ ಪೊಟ್ಟಣದ ದರ ₹50. ಮಳಿಗೆಗಳಲ್ಲಿ ಒಂದು ಕೆ.ಜಿ.ಯ ಎಳ್ಳುಬೆಲ್ಲ ಮಿಶ್ರಿತ ಪೊಟ್ಟಣದ ದರ ₹ 320ರಿಂದ ₹ 350 ಇದೆ. ಅರ್ಧ ಕೆ.ಜಿ ಸಕ್ಕರೆ ಅಚ್ಚು ₹150ರಂತೆ ಮಾರಾಟವಾಗುತ್ತಿದೆ.
‘ಸಂಕ್ರಾಂತಿ ಹಬ್ಬಕ್ಕೆ ಹೂವಿನ ದರಗಳು ಏರಿಕೆ ಕಂಡಿದೆ. ಪ್ರತಿ ಕೆ.ಜಿ. ಕನಕಾಂಬರ ₹ 1,000, ಮಲ್ಲಿಗೆ ₹ 1,400, ಚೆಂಡು ₹60, ಸೇವಂತಿಗೆ ₹ 150, ಗುಲಾಬಿ ₹ 200 ಮತ್ತು ಸುಗಂಧರಾಜ ₹ 120 ರಂತೆ ಮಾರಾಟವಾಗುತ್ತಿವೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕ ಸುಹಾಸ್ ತಿಳಿಸಿದರು.
ಕೆ.ಆರ್. ಮಾರುಕಟ್ಟೆಯ ದರಗಳು
ದರ ಪ್ರತಿ ಕೆಜಿಗೆ (₹ಗಳಲ್ಲಿ) ಕಳೆದ ವಾರ;ಈ ವಾರ
ಮಲ್ಲಿಗೆ;600;1400
ಕನಕಾಂಬರ;400;1000
ಗುಲಾಬಿ;150;200
ಸೇವಂತಿಗೆ;100;150
ಸುಗಂಧರಾಜ;70;120 ––
ಹಣ್ಣುಗಳ ದರ ಪ್ರತಿ ಕೆ.ಜಿಗೆ
ದ್ರಾಕ್ಷಿ;60;80
ಸೇಬು;120;100
ದಾಳಿಂಬೆ 80;60
ಏಲಕ್ಕಿ ಬಾಳೆ;70;50
ಬಾಳೆ;40;30 ––
ತರಕಾರಿ ದರಗಳು ಪ್ರತಿ ಕೆಜಿಗೆ
ಬಟಾಣಿ;100;60
ಕ್ಯಾರೆಟ್;50;40
ಕ್ಯಾಪ್ಸಿಕಮ್;40;60
ಈರುಳ್ಳಿ;30;25
ಬೀನ್ಸ್;60;80
ಟೊಮೆಟೊ;20;30
ಆಲೂಗಡ್ಡೆ;20;30
ಹಿರೇಕಾಯಿ;40;50
ಸೌತೆಕಾಯಿ;30;20
ಹಾಗಲಕಾಯಿ;40;50
ಬದನೆಕಾಯಿ;30;40
ಮೆಣಸಿನಕಾಯಿ;80;60
ಬಿಟ್‌ರೂಟ್;30;40
ಬೆಳ್ಳುಳ್ಳಿ;160;260
ಶುಂಠಿ;150;120
ಗೆಣಸು;30;40 ––
ಪ್ರತಿ ಕಟ್ಟಿಗೆ
ಕೊತ್ತಂಬರಿ;20;20
ಪುದೀನಾ;10;10
ಪಾಲಕ್;10;20
ಸಬ್ಬಕ್ಕಿ;15;20
ಮೆಂತೆ;10;20 ––
ಸಂಕ್ರಾಂತಿ ವಿಶೇಷ ಬಾಳೆಕಂಬ
ಜೋಡಿಗೆ;50
ಮಾವಿನ ತೋರಣ;20
ಕಬ್ಬು ಜೋಡಿಗೆ;120
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.