ADVERTISEMENT

ಪಾಲಿಶ್ ಯಂತ್ರಕ್ಕೆ ಸಿಲುಕಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 5:24 IST
Last Updated 12 ಏಪ್ರಿಲ್ 2021, 5:24 IST

ಬೆಂಗಳೂರು: ಸೀರೆ ಪಾಲಿಶ್ ಮಾಡುವ ಯಂತ್ರಕ್ಕೆ ಸಿಲುಕಿ ಸಚಿನ್ (14) ಎಂಬಾತ ಮೃತಪಟ್ಟಿದ್ದು, ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೃತ ಸಚಿನ್‌ನ ಪೋಷಕರು ಉತ್ತರಪ್ರದೇಶದವರು. ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಹೊಸಗುಡ್ಡದಹಳ್ಳಿಯಲ್ಲಿ ನೆಲೆಸಿದ್ದರು’ ಎಂದು ಪೊಲೀಸರು ಹೇಳಿದರು.

‘ಬಾಲಕನ ಅಕ್ಕ, ಹೊಸಗುಡ್ಡದಹಳ್ಳಿಯಲ್ಲಿರುವ ಸೀರೆಗೆ ಪಾಲಿಶ್ ಮಾಡುವ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಮಧ್ಯಾಹ್ನ ಅಕ್ಕನಿಗೆ ಊಟ ಕೊಡಲೆಂದು ಬಾಲಕ ಸಚಿನ್, ಕೇಂದ್ರಕ್ಕೆ ಬಂದಿದ್ದ. ಊಟ ಕೊಟ್ಟು ವಾಪಸು ಹೋಗುವಾಗ ಆಕಸ್ಮಿಕವಾಗಿ ಯಂತ್ರದ ಬಳಿ ಕೈ ಇಟ್ಟಿದ್ದ. ಕೈ ಯಂತ್ರದೊಳಗೆ ಹೋಗಿ ಮುರಿದಿತ್ತು. ತಲೆಗೂ ಪೆಟ್ಟಾಗಿ ರಕ್ತ ಸೋರುತ್ತಿತ್ತು.’

ADVERTISEMENT

‘ಕೇಂದ್ರದಲ್ಲಿದ್ದ ಸಿಬ್ಬಂದಿ, ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಮೃತಪಟ್ಟಿದ್ದಾನೆ. ಬಾಲಕನ ಸಾವಿಗೆ ಯಾರ ನಿರ್ಲಕ್ಷ್ಯ ಕಾರಣವೆಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.