ಬೆಂಗಳೂರು: ವಿಶ್ವ ಭೂದಿನದ ಅಂಗವಾಗಿ 'ನಮ್ಮ ಬೆಂಗಳೂರು ಫೌಂಡೇಷನ್' ಹಾಗೂ ಮೌಂಟ್ ಕಾರ್ಮೆಲ್ ಕಾಲೇಜುಗಳ ಆಶ್ರಯದಲ್ಲಿ ‘ಭೂಮಿಯನ್ನು ಉಳಿಸಿ, ನಮ್ಮ ಭವಿಷ್ಯವನ್ನು ಉಳಿಸಿ’ ಜನಜಾಗೃತಿ ಅಭಿಯಾನವು ಶುಕ್ರವಾರ ನಡೆಯಿತು.
ಪ್ರತಿಷ್ಠಾನದ ಸ್ವಯಂಸೇವಕರು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು, 'ಮರಗಳನ್ನು ಉಳಿಸಿ, ಭೂಮಿ ಉಳಿಸಿ', ‘ಸೈಕಲ್ ಬಳಸಿ ಹಸಿರು ಉಳಿಸಿ’, 'ಪ್ಲಾಸ್ಟಿಕ್ ಬಳಕೆ ತಪ್ಪಿಸಿ’ ‘ಕೆರೆಗಳನ್ನು ಉಳಿಸಿ' ಮುಂತಾದ ಸಂದೇಶವನ್ನು ಹೊಂದಿದ್ದ ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದರು. ಸಂಚಾರದ ಸಿಗ್ನಲ್‌ಗಳಲ್ಲಿ ‘ಸಿಗ್ನಲ್‌ಗಳಲ್ಲಿ ವಾಹನದ ಎಂಜಿನ್ ಆಫ್ ಮಾಡಿ ಇಂಧನ ಉಳಿಸಿ’ ಎಂಬ ಸಂದೇಶ ಸಾರಿದರು.
ಸಿಗ್ನಲ್‌ಗಳಲ್ಲಿ ನಿಲ್ಲಿಸಿದ್ದ ವಾಹನ ಸವಾರರ ಬಳಿ ತೆರಳಿ ವಾಹನದ ಎಂಜಿನ್ ಅನ್ನು ಆಫ್ ಮಾಡುವಂತೆ ಮನವಿ ಮಾಡಿದ ಸ್ವಯಂಸೇವಕರು, ‘ಇದರಿಂದ ಇಂಧನ, ಹಣವನ್ನು ಮಾತ್ರ ಉಳಿಸುವುದಲ್ಲ. ಈ ನಡೆಯು ವಾಯುಮಾಲಿನ್ಯ ಮತ್ತು ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸಲಿದೆ. ಪರಿಸರ ಮತ್ತು ನಮ್ಮ ಗ್ರಹವನ್ನು ಉಳಿಸುವುದಕ್ಕೂ ಕೊಡುಗೆ ನೀಡುತ್ತದೆ’ ಎಂದು ತಿಳಿಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.