ADVERTISEMENT

ದ್ವಿತೀಯ ಪಿಯುಸಿ: ಬಿಬಿಎಂಪಿ ಕಾಲೇಜುಗಳಿಗೆ ಶೇ 78ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2024, 14:38 IST
Last Updated 10 ಏಪ್ರಿಲ್ 2024, 14:38 IST
ಬಿಬಿಎಂಪಿ ಲೋಗೊ
ಬಿಬಿಎಂಪಿ ಲೋಗೊ   

ಬೆಂಗಳೂರು: ಬಿಬಿಎಂಪಿಯ 18 ಪದವಿಪೂರ್ವ ಕಾಲೇಜುಗಳ ದ್ವಿತೀಯ ಪಿಯು ಪರೀಕ್ಷೆಯಲ್ಲಿ 1,889 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 78ರಷ್ಟು ಫಲಿತಾಂಶ ದಾಖಲಾಗಿದೆ. 227 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದಿದ್ದಾರೆ.

2023–24ನೇ ಸಾಲಿನಲ್ಲಿ 2,427 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದರು. ಭೈರವೇಶ್ವರ ನಗರ ಪದವಿ ಪೂರ್ವ ಕಾಲೇಜು ಶೇ 94.96 ಫಲಿತಾಂಶ ಗಳಿಸಿ ಅಗ್ರಸ್ಥಾನ ಪಡೆದಿದೆ. ಕಸ್ತೂರಬಾ ನಗರದ ಪದವಿ ಪೂರ್ವ ಕಾಲೇಜು ಶೇ 88.10, ಕಾವೇರಿಪುರದ ಪದವಿ ಪೂರ್ವ ಕಾಲೇಜು ಶೇ 87.69ರಷ್ಟು ಫಲಿತಾಂಶ ದಾಖಲಿಸಿ, ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ.

2022–23ನೇ ಸಾಲಿನಲ್ಲಿ ಶೇ 63.18ರಷ್ಟು ಫಲಿತಾಂಶ ಬಂದಿದ್ದು, ಈ ವರ್ಷ ಅದಕ್ಕಿಂತ ಶೇ 15ರಷ್ಟು ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2023-24ನೇ ಸಾಲಿನಲ್ಲಿ ಪಾಲಿಕೆಯ ಪದವಿ ಪೂರ್ವ ಕಾಲೇಜುಗಳಲ್ಲಿ ಕ್ಲೀವ್‌ಲ್ಯಾಂಡ್‌ ಟೌನ್‌ ಕಾಲೇಜಿನ 62, ಕಸ್ತೂರಬಾ ನಗರ ಕಾಲೇಜಿನ 36, ಭೈರವೇಶ್ವರ ನಗರ ಕಾಲೇಜಿನ 28, ಶ್ರೀರಾಂಪುರ ಕಾಲೇಜಿನ 25, ಉತ್ತರಹಳ್ಳಿ ಕಾಲೇಜಿನ 13, ಪಿಳ್ಳಣ್ಣ ಗಾರ್ಡನ್‌ನ 10 ವಿದ್ಯಾರ್ಥಿಗಳು ಶೇ 85ಕ್ಕಿಂತ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿ ಗಳಿಸಿದ್ದಾರೆ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹಲೋತ್ ತಿಳಿಸಿದ್ದಾರೆ.

ADVERTISEMENT

ಆಸ್ಟಿನ್‌ ಟೌನ್‌ ಕಾಲೇಜು ಶೇ 47.22ರಷ್ಟು ಫಲಿತಾಂಶ ದಾಖಲಿಸಿದ್ದು, ಪಾಲಿಕೆ ಕಾಲೇಜುಗಳಲ್ಲಿ ಇದು ಕನಿಷ್ಠವಾಗಿದೆ. 36 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಥಣಿಸಂದ್ರ ಕಾಲೇಜು ಶೇ 51.85ರಷ್ಟು ಫಲಿತಾಂಶ ಗಳಿಸಿದ್ದು, 27 ವಿದ್ಯಾರ್ಥಿಗಳಲ್ಲಿ 14 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಎರಡೂ ಶಾಲೆಗಳಲ್ಲಿ ಯಾರೂ ಅತ್ಯುನ್ನತ ಶ್ರೇಣಿ ಗಳಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.