ADVERTISEMENT

ಬೆಂಗಳೂರು | ವಿದ್ಯಾರ್ಥಿನಿಗೆ ಮುತ್ತು ನೀಡಿದ ಭದ್ರತಾ ಸಿಬ್ಬಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:44 IST
Last Updated 27 ಅಕ್ಟೋಬರ್ 2024, 15:44 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೇಯಿಂಗ್ ಗೆಸ್ಟ್‌ನಲ್ಲಿ (ಪಿ.ಜಿ.) ವಾಸವಿದ್ದ ಕಾಲೇಜು ವಿದ್ಯಾರ್ಥಿನಿಗೆ ಮುತ್ತು ನೀಡಿದ ಭದ್ರತಾ ಸಿಬ್ಬಂದಿ ರುದ್ರಯ್ಯ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಪಶ್ಚಿಮ ಬಂಗಾಳದ 19 ವರ್ಷದ ಯುವತಿ ಸಮೀಪದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅ.24ರ ರಾತ್ರಿ 11.30ರ ಸುಮಾರಿನಲ್ಲಿ ಪಿ.ಜಿಯ ಸ್ಟೇರ್‌ಕೇಸ್ ಮೇಲಿಟ್ಟಿದ್ದ ಲೈಟರ್‌ ತೆಗೆದುಕೊಳ್ಳಲು ಯುವತಿ ಹೋದ ಸಂದರ್ಭದಲ್ಲಿ ರುದ್ರಯ್ಯ ಆಕೆಯನ್ನು ತಬ್ಬಿಕೊಂಡು ಮುತ್ತು ನೀಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಪಿ.ಜಿ. ಮಾಲೀಕರು ಮತ್ತು ಮಹಿಳಾ ವಾರ್ಡನ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಮಾಲೀಕರು ಹಾಗೂ ವಾರ್ಡನ್‌ ಸ್ಥಳಕ್ಕೆ ಬಂದು, ಯುವತಿಯನ್ನು ಸಂತೈಸಿ, ಭದ್ರತಾ ಸಿಬ್ಬಂದಿ ಎಸಗಿದ್ದ ಕೃತ್ಯ ರೆಕಾರ್ಡ್ ಆಗಿದ್ದ ಸಿಸಿಟಿವಿ ದೃಶ್ಯಾವಳಿ ಅಳಿಸಿ ಹಾಕಿಸಿದ್ದರು.

‘ಸಂತ್ರಸ್ತೆ ನೀಡಿದ ದೂರಿನ ಅನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪಿ.ಜಿ ಮಾಲೀಕರು ಮತ್ತು ವಾರ್ಡನ್‌ ಸಿಸಿಟಿವಿ ದೃಶ್ಯಾವಳಿ ಅಳಿಸಿ ಹಾಕಿ ಯಾರೊಂದಿಗೂ ಹೇಳದಂತೆ ಬೆದರಿಸಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹಾಗಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.