ADVERTISEMENT

ಬೀಜ ವಿತರಣೆ: ಐಎಚ್‌ಆರ್‌–ಎನ್‌ಎಸ್‌ಸಿ ನಡುವೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:15 IST
Last Updated 3 ಜುಲೈ 2024, 16:15 IST
ತೋಟಗಾರಿಕಾ ಬೆಳೆಗಳ ಗುಣಮಟ್ಟದ ಬೀಜಗಳನ್ನು ರೈತರಿಗೆ ವಿತರಿಸುವ ಸಲುವಾಗಿ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಸಿಎಆರ್), ರಾಷ್ಟ್ರೀಯ ಬೀಜ ನಿಗಮದೊಂದಿಗೆ (ಎನ್ಎಸ್ ಸಿ) ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿತು
ತೋಟಗಾರಿಕಾ ಬೆಳೆಗಳ ಗುಣಮಟ್ಟದ ಬೀಜಗಳನ್ನು ರೈತರಿಗೆ ವಿತರಿಸುವ ಸಲುವಾಗಿ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಸಿಎಆರ್), ರಾಷ್ಟ್ರೀಯ ಬೀಜ ನಿಗಮದೊಂದಿಗೆ (ಎನ್ಎಸ್ ಸಿ) ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿತು   

ಹೆಸರಘಟ್ಟ: ಇಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌) ಅಭಿವೃದ್ಧಿಪಡಿಸಿರುವ ತೋಟಗಾರಿಕೆ ಬೆಳೆಗಳ ಗುಣಮಟ್ಟದ ಬೀಜಗಳನ್ನು ರೈತರಿಗೆ ತಲುಪಿಸುವ ಸಲುವಾಗಿ ರಾಷ್ಟ್ರೀಯ ಬೀಜ ನಿಗಮದೊಂದಿಗೆ (ಎನ್ಎಸ್ ಸಿ) ಒಪ್ಪಂದ ಮಾಡಿಕೊಂಡಿದೆ.

ಎರಡೂ ಸಂಸ್ಥೆಯ ಮುಖ್ಯಸ್ಥರು ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದರು. ಐಐಎಚ್ಆರ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ತೋಟಗಾರಿಕೆ ಬೆಳೆಗಳ, ಗುಣಮಟ್ಟ ಹಾಗೂ ರೋಗನಿರೋಧಕ ತಳಿಗಳು ಮತ್ತು ಹೈಬ್ರಿಡ್ ಬೀಜಗಳನ್ನು ದೇಶದಾದ್ಯಂತ ರೈತರ ಕ್ಷೇತ್ರವನ್ನು ತಲುಪಲು ಈ ಒಪ್ಪಂದವು ಸಹಕಾರಿಯಾಗಲಿದೆ. ಈ ಒಪ್ಪಂದದ ಅವಧಿ ಒಂದು ವರ್ಷವಿರುತ್ತದೆ. ನಂತರದಲ್ಲಿ ಇದನ್ನು ವಿಸ್ತರಿಸಬಹುದಾಗಿದೆ ಎಂದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಐಐಎಚ್ಆರ್ ನಿರ್ದೇಶಕ ಟಿ.ಕೆ.ಬೆಹೆರಾ, ರಾಷ್ಟ್ರೀಯ ಬೀಜ ನಿಗಮದ ಪ್ರಾದೇಶಿಕ ವ್ಯವಸ್ಥಾಪಕ ಎಂ.ಅಹಮದ್ ರಾಝಾ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.