ಬೆಂಗಳೂರು: ತಮ್ಮ ಮಗ ನಿಖಿಲ್ ನಾಯಕನಾಗಿ ನಟಿಸಿರುವ ‘ಸೀತಾರಾಮ ಕಲ್ಯಾಣ’ ಸಿನಿಮಾವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಅನಿತಾ ಕುಮಾರಸ್ವಾಮಿ ಅವರು ಕಬ್ಬನ್ ಪಾರ್ಕ್ ಠಾಣೆಗೆ ದೂರು ಕೊಟ್ಟಿದ್ದಾರೆ.
‘ಚನ್ನಾಂಬಿಕಾ ಫಿಲ್ಮ್’ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡಿರುವ ಅನಿತಾ, ಜ.25ರಂದು ವಿಶ್ಯದಾದ್ಯಂತ ಬಿಡುಗಡೆ ಮಾಡಿದ್ದರು.
ಫೆ.5ರಂದು ದೂರು ಕೊಟ್ಟಿರುವ ಅವರು, ‘ಕಿಡಿಗೇಡಿಗಳು ಕ್ಯಾಮೆರಾ/ಮೊಬೈಲ್ ಬಳಸಿ ಚಿತ್ರಮಂದಿರದಲ್ಲಿ ಪೂರ್ತಿ ಸಿನಿಮಾವನ್ನು ಶೂಟ್ ಮಾಡಿದ್ದಾರೆ. ನಂತರ ಅದನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾರೆ. ಇದರಿಂದ ಸಂಸ್ಥೆಗೆ ತುಂಬ ನಷ್ಟ ಉಂಟಾಗಿದೆ’ ಎಂದು ಹೇಳಿದ್ದಾರೆ.
‘1957ರ ಕಾಪಿರೈಟ್ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಟಿ.ಎಸ್.ಶಶಿಧರ್ ಎಂಬಾತನ ಫೇಸ್‌ಬುಕ್ ಖಾತೆಯಲ್ಲಿ ಸಿನಿಮಾ ಸಿಕ್ಕಿದೆ. ಹೀಗಾಗಿ, ಆತನನ್ನೇ ಪ್ರಮುಖ ಆರೋಪಿಯನ್ನಾಗಿ ಮಾಡಿ, ‘ಕನ್ನಡ ನ್ಯೂ ಮೂವೀಸ್’ ಪೋರ್ಟಲ್ ಅನ್ನು 2ನೇ ಆರೋಪಿ ಸ್ಥಾನದಲ್ಲಿ ಪರಿಗಣಿಸಿದ್ದೇವೆ’ ಎಂದು ಕಬ್ಬನ್ ಪಾರ್ಕ್ ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.