ADVERTISEMENT

ವಾರ್ತಾ ಇಲಾಖೆ ಅಧಿಕಾರಿಗಳಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 20:07 IST
Last Updated 29 ಏಪ್ರಿಲ್ 2023, 20:07 IST
ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಡಿ.ಪಿ.ಮುರುಳಿಧರ, ಕೆ.ಪಿ. ಪುಟ್ಟಸ್ವಾಮಿ, ಬಿ.ಎಸ್. ಲತಾ ಅವರನ್ನು ಸನ್ಮಾನಿಸಲಾಯಿತು.
ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಶುಕ್ರವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಡಿ.ಪಿ.ಮುರುಳಿಧರ, ಕೆ.ಪಿ. ಪುಟ್ಟಸ್ವಾಮಿ, ಬಿ.ಎಸ್. ಲತಾ ಅವರನ್ನು ಸನ್ಮಾನಿಸಲಾಯಿತು.    

ಬೆಂಗಳೂರು: ನಿವೃತ್ತರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಡಿ.ಪಿ.ಮುರಳೀಧರ್, ಉಪನಿರ್ದೇಶಕ ಕೆ.ಪಿ.ಪುಟ್ಟಸ್ವಾಮಯ್ಯ, ಆಡಳಿತಾಧಿಕಾರಿ ಲತಾ, ಸಿಬ್ಬಂದಿ ಧನರಾಜ್ ಅವರಿಗೆ ವಾರ್ತಾ ಇಲಾಖೆಯ ಬಳಗದಿಂದ ಶನಿವಾರ ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಮುರುಳೀಧರ್, ‘ಸರ್ಕಾರ ಮತ್ತು ಮಾಧ್ಯಮಗಳ ಕೊಂಡಿಯಾಗಿರುವ ಇಲಾಖೆಯಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿರುವುದು ಸಂತೋಷ ತಂದಿದೆ ಎಂದರು.

ಇಲಾಖೆಯಲ್ಲಿ ಬಹಳಷ್ಟು ಜನ ನಿವೃತ್ತಿಯಾಗುತ್ತಿದ್ದಾರೆ. ಆದರೆ, ನೇಮಕಾತಿ ಆಗುತ್ತಿಲ್ಲ. ಶೇ 50ರಷ್ಟು ಹುದ್ದೆಗಳು ಖಾಲಿ ಉಳಿದಿವೆ. ಸಿಬ್ಬಂದಿ ಕೊರತೆ ಇದ್ದರೆ ದಕ್ಷತೆಯಿಂದ ಕೆಲಸ ಮಾಡುವುದು  ಕಷ್ಟ ಎಂದು ಹೇಳಿದರು.

ADVERTISEMENT

ಉಪನಿರ್ದೇಶಕ ಕೆ.ಪಿ‌‌.ಪುಟ್ಟಸ್ವಾಮಯ್ಯ ಮಾತನಾಡಿ, ‘ಮಾಧ್ಯಮ ನಿರ್ವಹಣೆ ಅತ್ಯಂತ ಸವಾಲಿನದ್ದು, ಎಲ್ಲರೊಂದಿಗೆ ಸಂಪರ್ಕ ಸಾಧಿಸಿ ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ’ ಎಂದರು,

ಇಲಾಖೆಯ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ಮಂಜುನಾಥ ಡೊಳ್ಳಿನ್, ಬಿ.ಕೆ ರಾಮಲಿಂಗಪ್ಪ, ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು, ಸಹಾಯಕ ನಿರ್ದೇಶಕರಾದ  ಬಿ.ಜಿ.ಪೂರ್ಣಿಮಾ, ಭಾಗ್ಯ, ಚೇತನಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.