ADVERTISEMENT

ಬೆಂಗಳೂರು ವಿಭಾಗದ ಹಲವು ರೈಲು ನಿಲ್ದಾಣಗಳು ಮೇಲ್ದರ್ಜೆಗೆ; ಕಾಮಗಾರಿ ಪ್ರಗತಿಯಲ್ಲಿ 

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 13:08 IST
Last Updated 22 ಅಕ್ಟೋಬರ್ 2024, 13:08 IST
<div class="paragraphs"><p>ಬಂಗಾರಪೇಟೆ ರೈಲು ನಿಲ್ದಾಣ</p></div>

ಬಂಗಾರಪೇಟೆ ರೈಲು ನಿಲ್ದಾಣ

   

ಬೆಂಗಳೂರು: ಅಮೃತ್ ಭಾರತ್ ನಿಲ್ದಾಣ ಯೋಜನೆಯಲ್ಲಿ (ABSS) ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿರುವ ಮಾಹಿತಿಯನ್ನು ರೈಲ್ವೆ ಇಲಾಖೆ ಹಂಚಿಕೊಂಡಿದೆ.

ಬೆಂಗಳೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳಾದ ಬಂಗಾರಪೇಟೆ, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಕೆಂಗೇರಿ, ಕೃಷ್ಣರಾಜಪುರಂ (ಮೈಸೂರು), ಮಾಲೂರು (ಕೋಲಾರ), ಮಂಡ್ಯ, ಮಲ್ಲೇಶ್ವರಂ, ವೈಟ್‌ಫಿಲ್ಡ್‌, ರಾಮನಗರ, ತುಮಕೂರು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ರೈಲ್ವೆಯು ತಿಳಿಸಿದೆ.

ADVERTISEMENT

ಅಮೃತ್ ಭಾರತ್ ನಿಲ್ದಾಣ ಯೋಜನೆಗಾಗಿ ರೈಲ್ವೆಯು ನೂರಾರು ಕೋಟಿ ವೆಚ್ಚ ಮಾಡುತ್ತಿದೆ. 

ನಿಲ್ದಾಣಗಳನ್ನು ಆಧುನೀಕರಿಸುವುದು, ಮೂಲಸೌಕರ್ಯಗಳ ಸುಧಾರಣೆ ಸೇರಿದಂತೆ ಪ್ರಯಾಣಿಕರಿಗೆ ಹಿತಕರ ಅನುಭವ ನೀಡುವುದು  ಈ ಅಮೃತ್ ಭಾರತ್ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.