ಬೆಂಗಳೂರು: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಕೂಲಿ ಕಾರ್ಮಿಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿರುವ ಘಟನೆ ನಡೆದಿದೆ.
ಬಾಲಕಿ ಬಟ್ಟೆ ಒಣಗಿ ಹಾಕುವ ಸಲುವಾಗಿ ಮಹಡಿ ಮೇಲೆ ತೆರಳಿದ್ದ ವೇಳೆ ಪೋಷಕರು ಇಲ್ಲದ್ದನ್ನು ಗಮನಿಸಿ, ಆರೋಪಿ ಕತ್ಯವೆಸಗಿದ್ದಾನೆ. ಬಾಲಕಿ ಕೂಗದಂತೆ ಬಾಯಿ ಮುಚ್ಚಿದ್ದ. ವಿಷಯ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ, ಪರಾರಿಯಾಗಿದ್ದಾನೆ.
ಆರೋಪಿಯ ಚಲನವಲನದ ದೃಶ್ಯ ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾಗಿದ್ದು, ಪೊಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.