ADVERTISEMENT

ಹಿಂಬಾಕಿ ಬಿಡುಗಡೆಗೆ ಲೈಂಗಿಕ ಅಲ್ಪಸಂಖ್ಯಾತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 0:16 IST
Last Updated 3 ಡಿಸೆಂಬರ್ 2020, 0:16 IST
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸದಸ್ಯರು ಕೆಎಸ್‌ಎಪಿಎಸ್‌ನ ಯೋಜನಾ ನಿರ್ದೇಶಕಿ ಲೀಲಾವತಿ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಸದಸ್ಯರಾದ ಮಲ್ಲಪ್ಪ, ಕಿರಣ್, ದಿಲೀಪ್‌ರಾಜ್, ಇಬ್ರಾಹಿಂ, ಇಮ್ರಾನ್, ಅಕ್ರಂ, ವೆಂಕಟೇಶರೆಡ್ಡಿ ಇತರರು ಇದ್ದಾರೆ
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸದಸ್ಯರು ಕೆಎಸ್‌ಎಪಿಎಸ್‌ನ ಯೋಜನಾ ನಿರ್ದೇಶಕಿ ಲೀಲಾವತಿ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆಯ ಸದಸ್ಯರಾದ ಮಲ್ಲಪ್ಪ, ಕಿರಣ್, ದಿಲೀಪ್‌ರಾಜ್, ಇಬ್ರಾಹಿಂ, ಇಮ್ರಾನ್, ಅಕ್ರಂ, ವೆಂಕಟೇಶರೆಡ್ಡಿ ಇತರರು ಇದ್ದಾರೆ   

ಬೆಂಗಳೂರು: ‘ಏಡ್ಸ್‌ ತಡೆ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಘಟನೆಗಳಿಗೆ ರಾಜ್ಯ ಸರ್ಕಾರ ಅನುದಾನ ಘೋಷಿಸುತ್ತದೆ. ಆದರೆ, 2012ರಿಂದ 2019ರವರೆಗೆ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು’ ಎಂದು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಒತ್ತಾಯಿಸಿದೆ.

‘ಲಾಕ್‌ಡೌನ್‌ನಂತಹ ಸಂಕಷ್ಟದ ಸಂದರ್ಭಗಳಲ್ಲಿಯೂ ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ನಿರೋಧ್‌ ವಿತರಣೆ, ಎಸ್‌ಟಿಐ ಚಿಕಿತ್ಸೆ, ಕ್ಲಿನಿಕ್, ಕೌನ್ಸೆಲಿಂಗ್ ಸೌಲಭ್ಯ ಒದಗಿಸಲಾಗಿದೆ. ಆದರೂ, ಸರ್ಕಾರದಿಂದ ಬರಬೇಕಾದ ಹಣ ಬಂದಿಲ್ಲ’ ಎಂದು ವೇದಿಕೆ ದೂರಿದೆ.

‘ಲಾಕ್‌ಡೌನ್‌ನಲ್ಲಿ ಜಿಲ್ಲಾ ಸಂಘಟನೆಗಳು ಜವಾಬ್ದಾರಿಯಿಂದ ಕೆಲಸ ಮಾಡಿವೆ. ಏಡ್ಸ್‌ ತಡೆ ಕಾರ್ಯಕ್ರಮಗಳಿಗೆ ಸುಮಾರು 6 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಇದಕ್ಕಾಗಿ ಕೆಲಸ ಮಾಡಿದವರಿಗೂ ಸಂಬಳ ನೀಡಲಾಗಿಲ್ಲ’ ಎಂದು ಅದು ಹೇಳಿದೆ.

ADVERTISEMENT

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಎಚ್‌ಐವಿ ಬಾಧಿತರಿಗೆ ಸರಿಯಾದ ಆರೈಕೆ ಮತ್ತು ಬೆಂಬಲಕ್ಕಾಗಿ ಉಚಿತ ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಸಂತ್ರಸ್ತರಿಗೆ ಮೂಲಸೌಕರ್ಯ ಒದಗಿಸಬೇಕು’ ಎಂದು ವೇದಿಕೆ ಆಗ್ರಹಿಸಿದೆ.

‘ಲೈಂಗಿಕ ಅಲ್ಪಸಂಖ್ಯಾತರಿಗೆ ಹಿಂಬಾಕಿ ಬಿಡುಗಡೆ ಬೇಡಿಕೆಯನ್ನು ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ. ಈ ಕುರಿತು ಶೀಘ್ರ ತೀರ್ಮಾನ
ಕೈಗೊಳ್ಳಲಾಗುವುದು’ ಎಂದು ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿಯ (ಕೆಎಸ್‌ಎಪಿಎಸ್‌) ಯೋಜನಾ ನಿರ್ದೇಶಕಿ ಲೀಲಾವತಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.