ADVERTISEMENT

ಬಿಎಂಶ್ರೀ ಪ್ರತಿಷ್ಠಾನ: ಶಾ.ಬಾಲುರಾವ್ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 14:14 IST
Last Updated 26 ಅಕ್ಟೋಬರ್ 2024, 14:14 IST
<div class="paragraphs"><p>ಕಾರ್ಯಕ್ರಮದಲ್ಲಿ ಡಿ.ಎ. ಶಂಕರ್ ಅವರಿಗೆ ‘ಶಾ. ಬಾಲುರಾವ್ ಅನುವಾದ ಪ್ರಶಸ್ತಿ’ ಮತ್ತು ಶಂಕರ್ ಸಿಹಿಮೊಗ್ಗೆ ಅವರಿಗೆ ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. </p></div>

ಕಾರ್ಯಕ್ರಮದಲ್ಲಿ ಡಿ.ಎ. ಶಂಕರ್ ಅವರಿಗೆ ‘ಶಾ. ಬಾಲುರಾವ್ ಅನುವಾದ ಪ್ರಶಸ್ತಿ’ ಮತ್ತು ಶಂಕರ್ ಸಿಹಿಮೊಗ್ಗೆ ಅವರಿಗೆ ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

   

ಬೆಂಗಳೂರು: ಬಿ.ಎಂ.ಶ್ರೀ ಪ್ರತಿಷ್ಠಾನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅನುವಾದಕ ಡಿ.ಎ. ಶಂಕರ್ ಅವರಿಗೆ ‘ಶಾ. ಬಾಲುರಾವ್ ಅನುವಾದ ಪ್ರಶಸ್ತಿ’ ಹಾಗೂ ಬರಹಗಾರ ಶಂಕರ್ ಸಿಹಿಮೊಗ್ಗೆ ಅವರಿಗೆ ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಡಿ.ಎ. ಶಂಕರ್ ಅವರ ‘ಡಾಕ್ಟರ್ ಫಾಸ್ಟರ್ಸ್’ ನಾಟಕ ಹಾಗೂ ಶಂಕರ್ ಸಿಹಿಮೊಗ್ಗೆ ಅವರ ‘ಇರುವೆ ಮತ್ತು ಗೋಡೆ’ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದ್ದವು. ಪ್ರಶಸ್ತಿಗಳು ತಲಾ ₹ 25 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿವೆ.

ADVERTISEMENT

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ‘ಸಾಹಿತ್ಯ ಅಕಾಡೆಮಿಯ ಉದ್ಯೋಗಿಯಾಗಿದ್ದ ಶಾ.ಬಾಲುರಾವ್ ಅವರು, ಅಕಾಡೆಮಿಯನ್ನು ಸಾಹಿತ್ಯಿಕವಾಗಿ ಕಟ್ಟಿದ್ದರು. ಅಕಾಡೆಮಿಯಿಂದ ಇಂಗ್ಲಿಷ್‌ನಲ್ಲಿ ಪ್ರಕಟವಾಗುತ್ತಿದ್ದ ‘ಇಂಡಿಯನ್ ಲಿಟರೇಚರ್‌’ನ ಸಂಪಾದಕರಾಗಿದ್ದರು. ಅನುವಾದ ಮತ್ತು ಸೃಜನಶೀಲತೆಗೆ ಈ ಮ್ಯಾಗಜಿನ್ ಸಹಕಾರಿಯಾಗಿತ್ತು. ಕಳೆದ ಏಳೆಂಟು ವರ್ಷಗಳಿಂದ ಅನುವಾದ ಪ್ರಕ್ರಿಯೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ವೇಗ ಪಡೆದಿದೆ’ ಎಂದು ಹೇಳಿದರು. 

ಪ್ರಶಸ್ತಿ ಪುರಸ್ಕೃತ ಡಿ.ಎ. ಶಂಕರ್, ‘ಅನುವಾದ ಮಾಡುವುದು ಅಂದರೇ, ನಮ್ಮದಲ್ಲದನ್ನು ನಾವು ಕಬ್ಜ ಮಾಡಿಕೊಳ್ಳುವುದಾಗಿದೆ. ವಿಷಯ, ಭಾಷೆ, ಪಾತ್ರ ಯಾವುದೂ ನಮ್ಮದಾಗಿರುವುದಿಲ್ಲ. ಇನ್ನೊಂದು ರಾಜ್ಯವನ್ನು ಗೆದ್ದರೀತಿ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿ.ಎ. ಶಂಕರ್ ಅವರಿಗೆ ‘ಶಾ. ಬಾಲುರಾವ್ ಅನುವಾದ ಪ್ರಶಸ್ತಿ’ ಮತ್ತು ಶಂಕರ್ ಸಿಹಿಮೊಗ್ಗೆ ಅವರಿಗೆ ‘ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಸಾಹಿತಿ ಹಂ.ಪ. ನಾಗರಾಜಯ್ಯ, ಅಗ್ರಹಾರ ಕೃಷ್ಣಮೂರ್ತಿ, ಕಮಲಿನಿ ಶಾ. ಬಾಲುರಾವ್ ಮತ್ತು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಉಪಸ್ಥಿತರಿದ್ದರು    ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.