ADVERTISEMENT

ಶಂಕರ್ ಬಿದರಿ ಆತ್ಮಚರಿತ್ರೆ ‘ಸತ್ಯಮೇವ ಜಯತೇ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 22:07 IST
Last Updated 2 ಅಕ್ಟೋಬರ್ 2022, 22:07 IST
‘ಸತ್ಯಮೇವ ಜಯತೇ’ ಕೃತಿಯನ್ನು ಶಾಸಕ ಜಗದೀಶ ಶೆಟ್ಟರ್ ಭಾನುವಾರ ಬಿಡುಗಡೆಗೊಳಿಸಿದರು. ಶಂಕರ ಬಿದರಿ (ಎಡಗಡೆಯವರು), ಅನಿಲ ಗೋಕಾಕ್, ಅರವಿಂದ ಜತ್ತಿ, ಡಾ. ಗುರುಲಿಂಗ ಕಾಪಸೆ, ವಿಶ್ವೇಶ್ವರ ಭಟ್ ಇದ್ದರು-– ಪ್ರಜಾವಾಣಿ ಚಿತ್ರ
‘ಸತ್ಯಮೇವ ಜಯತೇ’ ಕೃತಿಯನ್ನು ಶಾಸಕ ಜಗದೀಶ ಶೆಟ್ಟರ್ ಭಾನುವಾರ ಬಿಡುಗಡೆಗೊಳಿಸಿದರು. ಶಂಕರ ಬಿದರಿ (ಎಡಗಡೆಯವರು), ಅನಿಲ ಗೋಕಾಕ್, ಅರವಿಂದ ಜತ್ತಿ, ಡಾ. ಗುರುಲಿಂಗ ಕಾಪಸೆ, ವಿಶ್ವೇಶ್ವರ ಭಟ್ ಇದ್ದರು-– ಪ್ರಜಾವಾಣಿ ಚಿತ್ರ   

ಬೆಂಗಳೂರು: ನಿವೃತ್ತ ಡಿಜಿ– ಐಜಿಪಿ ಶಂಕರ ಬಿದರಿ ಅವರ ಆತ್ಮಚರಿತ್ರೆ ‘ಸತ್ಯಮೇವ ಜಯತೇ’ ಕೃತಿಯನ್ನು ಶಾಸಕ ಜಗದೀಶ ಶೆಟ್ಟರ್ ಭಾನುವಾರ ಬಿಡುಗಡೆಗೊಳಿಸಿದರು.

ಬಸವ ಸಮಿತಿ ವತಿಯಿಂದ ನಗರದಲ್ಲಿ ಗಾಂಧಿ ಜಯಂತಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಜಗದೀಶ ಶೆಟ್ಟರ್ ಮಾತನಾಡಿ, ‘ಅಧಿಕಾರಿಗಳು, ರಾಜಕೀಯ ಮುಖಂಡರು, ರಾಜಕೀಯದ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸೇರಿದಂತೆ ಜನರಿಗಾಗಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಈ ಕೃತಿ ಮಾರ್ಗದರ್ಶಕವಾಗಿದೆ’ ಎಂದರು.

ADVERTISEMENT

‘ರಾಜಕಾರಣಿಗಳು ಹಾಗೂ ಅಧಿಕಾರಿಗಳ ಮಧ್ಯೆ ಸಂಬಂಧ ಹೇಗಿರುತ್ತದೆ? ಆಡಳಿತ ವ್ಯವಸ್ಥೆ ಹಾಗೂ ವೀರಪ್ಪನ್ ಕಾರ್ಯಾಚರಣೆ ಸೇರಿದಂತೆ ಹತ್ತಾರು ಕುತೂಹಲಕಾರಿ ಸಂಗತಿಗಳು ಕೃತಿಯಲ್ಲಿವೆ’ ಎಂದರು.

ಸಾಹಿತಿ ಡಾ. ಗುರುಲಿಂಗ ಕಾಪಸೆ ಮಾತನಾಡಿ, ‘ಶಂಕರ ಬಿದರಿ ಅವರದ್ದು ಐಎಎಸ್–ಐಪಿಎಸ್ ಕುಟುಂಬ. ಹೊರ ರಾಜ್ಯದಲ್ಲೂ ಕುಟುಂಬ ಹೆಸರು ಮಾಡಿದೆ. ಜೀವನದುದ್ದಕ್ಕೂ ಹೋರಾಟ ನಡೆಸಿದ್ದ ಶಂಕರ ಬಿದರಿ ಅವರಿಗೆ ಜ್ಞಾನಬಲದ ಜೊತೆಗೆ ದೈವಬಲವೂ ಇದೆ’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಅನಿಲ ಗೋಕಾಕ್ ಮಾತನಾಡಿದರು.ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ‘ವಿಶ್ವವಾಣಿ’ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಇದ್ದರು.

ಪುಸ್ತಕ ಪರಿಚಯ

ಪುಸ್ತಕ ಹೆಸರು: ಶಂಕರ ಮಹಾದೇವ ಬಿದರಿ ಆತ್ಮಚರಿತ್ರೆ– ‘ಸತ್ಯಮೇವ ಜಯತೇ’

ಪುಟಗಳು: 730

ಬೆಲೆ: ₹ 850

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.