ರಂಗಪಯಣ ತಂಡವು ನಗರದಲ್ಲಿ ಶಂಕರ್‌ನಾಗ್ ನಾಟಕೋತ್ಸವವನ್ನು ಐದು ದಿನಗಳ ಕಾಲ ಹಮ್ಮಿಕೊಂಡಿದೆ. ಉದ್ಘಾಟನಾ ಸಮಾರಂಭವು ನ.20ರಂದು ನಡೆಯಲಿದ್ದು, ರಂಗಗೀತೆ ಗಾಯನ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೆ.ವೈ.ನಾರಾಯಣಸ್ವಾಮಿ, ಎಚ್.ಎನ್.ಆರತಿ, ಸುಬ್ಬು ಹೊಲೆಯಾರ್, ರಘುನಂದನ್ ಬಿ.ಆರ್, ಅರುಣ್ ಸಾಗರ್ ಇರಲಿದ್ದಾರೆ. ಶಶಿಧರ್ ಅಡಪ ಅವರಿಗೆ ರಂಗಗೌರವ ಸಲ್ಲಿಸಲಾಗುತ್ತದೆ.
ಸಂಜೆ 7.30ಕ್ಕೆ ಸೋಮಾಲಿಯದ ಕಡಲುಗಳ್ಳರು ನಾಟಕ ಪ್ರದರ್ಶನ ನಡೆಯಲಿದೆ. ರಚನೆ/ಸಂಗೀತ/ ನಿರ್ದೇಶನ –ರಾಜ್‌ಗುರು
21 ರಂದು ಸಂಜೆ 5ಕ್ಕೆ – ಪ್ರವೀಣ್ ಬಿ.ಎಂ ಅವರಿಂದ ಕಾವ್ಯವಾಚನ, ನನ್ನೊಳಗಿನ ಕಡಲು ಪುಸ್ತಕ ಬಿಡುಗಡೆ ಸಮಾರಂಭ. ಪುಸ್ತಕದ ಕುರಿತು: ಕೋಟಿಗಾನಹಳ್ಳಿ ರಾಮಯ್ಯ. ಅಧ್ಯಕ್ಷತೆ: ಚಂದ್ರಶೇಖರ ಮೂರ್ತಿ, ಸಿದ್ಧಾರ್ಥ್ ಆನಂದ್ ಮಾಲೂರು.
ಸಂಜೆ 7.15ಕ್ಕೆ ಬದುಕು ಜಟಕಾ ಬಂಡಿ: ರಚನೆ /ರಾಜ್‌ಗುರು– ವಿನ್ಯಾಸ ಮತ್ತು ನಿರ್ದೇಶನ– ಕೃಷ್ಣಮೂರ್ತಿ ಕವತ್ತಾರ್– ಸಾತ್ವಿಕ ತಂಡದ ಅಭಿನಯ.
22ರಂದು ಸಂಜೆ 5ಕ್ಕೆ :‘ನಾಗರಕಟ್ಟೆ ವೇದಿಕೆ’–ಶಂಕರ್‌ನಾಗ್ ಅವರ ಜತೆಗಿನ ನೆನಪಿನ ಬುತ್ತಿ. ಬಿ.ಎಂ.ಗಿರಿರಾಜ್. ಸಂಜೆ 6ಕ್ಕೆ ನಾಟಕ– ರೋಹಿತ್ ವೇಮುಲ ಬದುಕ್ಕನಾಧರಿಸಿದ ರಂಗಪ್ರಸ್ತುತಿ ನಕ್ಷತ್ರದ ಧೂಳು– ರಚನೆ: ಹರ್ಷಕುಮಾರ್ ಕುಗ್ವೆ, ನಿರ್ದೇಶನ: ಪ್ರವೀಣ್ ರೆಡ್ಡಿ ಗುಂಜಹಳ್ಳಿ. ಸಂಜೆ 7.30ಕ್ಕೆ – ಗುಲಾಬಿ ಗ್ಯಾಂಗ್ ನಾಟಕ ಪ್ರದರ್ಶನ. ರಂಗರೂಪ:ಪ್ರವೀಣ್ ಸೂಡ. ರಚನೆ/ಸಂಗೀತ/ನಿರ್ದೇಶನ: ರಾಜ್‌ಗುರು
23ರಂದು ಸಂಜೆ 5ಕ್ಕೆ ಕಾವ್ಯಕಾರಣ– ಅಧ್ಯಕ್ಷತೆ: ಕೆ.ವೈ.ನಾರಾಯಣಸ್ವಾಮಿ. ಕಾವ್ಯದ ಕುರಿತು: ದಯಾ ಗಂಗನಘಟ್ಟ. ಭಾಗವಹಿಸುವ ಕವಿಗಳು: ರೂಮಿ ಹರೀಶ್, ಉಮಾ ವೈ.ಜಿ, ಅಶ್ವಿನಿ ಬೋಧ್, ಯಂಶ ಬೆಂಗಿಲ, ವಿಕಾಸ ಮೌರ್ಯ, ಪುನೀತ್ ತಥಾಗತ, ಯತಿರಾಜ್ ಬ್ಯಾಲಹಳ್ಳಿ, ಮಂಜುಳಾ ಕಿರುಗಾವಲು, ಮಂಜುನಾರಾಯಣ್, ಸ್ಫೂರ್ತಿ ಹರವು, ವನಿತಾ ಪಿ, ವಿಶಾಲ್ ಮಾಸ್ಟರ್, ಕ.ನಾ.ವಿಜಯ್‌ಕುಮಾರ್. ಸಂಜೆ 6ಕ್ಕೆ– ಸಂತ ಶಿಶುನಾಳ ಶರೀಫ ಹಾಗೂ ದ.ರಾ.ಬೇಂದ್ರೆ ವಿರಚಿತ ಹಾಡುಗಳ ಹಬ್ಬ
ಸಂಜೆ 7ಕ್ಕೆ ಮಹಾಬಲಯ್ಯನ ಕೋಟು ನಾಟಕ ಪ್ರದರ್ಶನ: ನಮ್ಮ ಹಳ್ಳಿ ಥಿಯೇಟರ್ ತಂಡದಿಂದ. ರಚನೆ/ ನಿಕೋಲಾಯ್ ಗೋಗಲ್. ರಂಗರೂಪ/ ನಿರ್ದೇಶನ : ಪ್ರೊ ಎಸ್. ಸಿ. ಗೌರಿಶಂಕರ್.
24ಕ್ಕೆ ಸಮಾರೋಪ ಸಮಾರಂಭ: ಸಂಜೆ 5ಕ್ಕೆ ರಂಗಗೀತೆಗಳು. ಕಾರ್ಯಕ್ರಮದಲ್ಲಿ : ಮೈಮ್ ರಮೇಶ್, ಬೈರಮಂಗಲ ರಾಮೇಗೌಡ್ರು, ಎಚ್.ಎಲ್.ಪುಷ್ಪ, ಮಾಗಡಿ ಗಿರೀಶ್. 7.30ಕ್ಕೆ ನಾಟಕ: ಆಲ್ ರೈಟ್ ಮಂತ್ರ ಮಾಂಗಲ್ಯ. ರಚನೆ: ಗಣೇಶ್ ಅಮೀನಗಡ, ಜಿಪಿಐಇಆರ್ ರಂಗತಂಡದಿಂದ ಅಭಿನಯ. ನಿರ್ದೇಶನ: ಮೈಮ್ ರಮೇಶ್ ರಂಗಾಯಣ.
ಕಾರ್ಯಕ್ರಮ ನಡೆಯುವ ಸ್ಥಳ
ರವೀಂದ್ರ ಕಲಾಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.