ADVERTISEMENT

ಶಿವಾನಂದ ಕೋಟಗೆ ‘ಕಾಳಿಂಗ ನಾವಡ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 16:06 IST
Last Updated 22 ಅಕ್ಟೋಬರ್ 2024, 16:06 IST
ಶಿವಾನಂದ ಕೋಟ
ಶಿವಾನಂದ ಕೋಟ   

ಬೆಂಗಳೂರು: ಕಲಾ ಕದಂಬ ಆರ್ಟ್ ಸೆಂಟರ್ ನೀಡುವ ‘ಕಾಳಿಂಗ ನಾವಡ ಪ್ರಶಸ್ತಿ’ಗೆ ಚಂಡೆ ವಾದಕರಾದ ಶಿವಾನಂದ ಕೋಟ ಆಯ್ಕೆಯಾಗಿದ್ದಾರೆ.

ಸಂಸ್ಥೆಯು ಪ್ರತಿ ವರ್ಷ ಯಕ್ಷಗಾನ ಸಾಧಕರೊಬ್ಬರಿಗೆ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಬೆಳ್ಳಿತಟ್ಟೆಯನ್ನು ಒಳಗೊಂಡಿದೆ. 

ಇದೇ 27ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಗವಿಪುರದಲ್ಲಿರುವ ಉದಯಭಾನು ಕಲಾಸಂಘದ ಸಭಾ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ರಾಧಾಕೃಷ್ಣ ಉರಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.