ಬೆಂಗಳೂರು: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿರುವ ಸತ್ಸಂಗ ಫೌಂಡೇಷನ್ ಆಶ್ರಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಆಧ್ಯಾತ್ಮಿಕ ಚಿಂತಕ ಶ್ರೀ ಎಂ ಅವರು ಸ್ಥಾಪಿಸಿರುವ ಈ ಆಶ್ರಮಕ್ಕೆ ಭೇಟಿ ನೀಡಿದ ರಾಷ್ಟ್ರಪತಿ, ಇದೇ ಸಂದರ್ಭದಲ್ಲಿ ಭಾರತ ಯೋಗ ವಿದ್ಯಾಕೇಂದ್ರದ ಯೋಗಶಾಲೆಯನ್ನು ಉದ್ಘಾಟಿಸಿದರು. ಈ ಆಶ್ರಮದಲ್ಲಿ ಮೊದಲ ಬಾರಿಗೆ ಯೋಗ ಶಿಕ್ಷಕ ತರಬೇತಿ ಕೋರ್ಸ್ ಆರಂಭಿಸಲಾಗಿದ್ದು, ದೇಶದ ಬೇರೆ ಬೇರೆ ಭಾಗಗಳಿಂದ ಇಲ್ಲಿಗೆ ವ್ಯಾಸಂಗಕ್ಕೆ ಬಂದಿರುವ ವಿದ್ಯಾರ್ಥಿಗಳನ್ನು ಅವರು ಅಭಿನಂದಿಸಿದರು.
‘ಯೋಗಾಭ್ಯಾಸದಿಂದ ಲಭ್ಯವಾಗುವ ಬಹುಮುಖ್ಯ ಅಂಶವೆಂದರೆ, ಆರೋಗ್ಯಯುತ ಮನಸ್ಸು ಮತ್ತು ಆರೋಗ್ಯವಂತ ದೇಹ. ಇದರಿಂದ ಏಕಾಗ್ರತೆಯೂ ಹೆಚ್ಚುತ್ತದೆ’ ಎಂದು ಅವರು ಹೇಳಿದರು.
ಸತ್ಸಂಗ ಫೌಂಡೇಷನ್ ವತಿಯಿಂದ ನಿರ್ಮಿಸಲಾಗುತ್ತಿರುವ ಸ್ವಾಸ್ಥ್ಯ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಶ್ರೀ ಎಂ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.