ADVERTISEMENT

ಕೆ.ಆರ್.ಪುರ: ಸಂಭ್ರಮದ ಶ್ರೀಪಟಾಲಮ್ಮ ದೇವಿ ಉತ್ಸವ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 23:23 IST
Last Updated 30 ಜುಲೈ 2024, 23:23 IST
ಶ್ರೀಪಟಾಲಮ್ಮದೇವಿ ಉತ್ಸವದಲ್ಲಿ ಮಹಿಳೆಯರು ತಂಬಿಟ್ಟು ಆರತಿ ಹೊತ್ತು ಸಾಗಿದರು
ಶ್ರೀಪಟಾಲಮ್ಮದೇವಿ ಉತ್ಸವದಲ್ಲಿ ಮಹಿಳೆಯರು ತಂಬಿಟ್ಟು ಆರತಿ ಹೊತ್ತು ಸಾಗಿದರು   

ಕೆ.ಆರ್.ಪುರ: ಗುಂಜೂರು ಗ್ರಾಮದ ಗ್ರಾಮ ದೇವತೆ ಶ್ರೀಪಟಲಾಮ್ಮ ದೇವಿಯ ಉತ್ಸವವು ವಿಜೃಂಭಣೆಯಿಂದ ನಡೆಯಿತು.

ಗುಂಜೂರು ಮತ್ತು ಬಳಗೆರೆ, ಗುಂಜೂರುಪಾಳ್ಯ, ಗುಂಜೂರು ಹೊಸಹಳ್ಳಿ ಗ್ರಾಮಗಳ ಸಾವಿರಕ್ಕೂ ಹೆಚ್ಚು ಮಹಿಳೆಯರು ತಂಬಿಟ್ಟಿನ ಕಳಸ ಹೊತ್ತು ಮೆರವಣಿಗೆ ಸಾಗಿದರು. ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ನಡೆದ ತಂಬ್ಬಿಟ್ಟಿನ ಆರತಿ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ಹೂವಿನ ಅಲಂಕಾರ ಮಾಡಲಾಗಿತ್ತು. ಮೆರವಣಿಗೆಯಲ್ಲಿ ಮಂಗಳವಾದ್ಯ, ತಮಟೆ, ಡೊಳ್ಳು ಕುಣಿತ, ವೀರಗಾಸೆ ವಾದ್ಯದ ತಂಡಗಳು ಮೆರಗು ನೀಡಿದವು. ತಮಟೆ ಸದ್ದಿಗೆ ಯುವಕರು ಕುಣಿದರು. ಉತ್ಸವದಲ್ಲಿ ಭಕ್ತರು ಉತ್ಸುಕತೆಯಿಂದ ಭಾಗವಹಿಸಿದ್ದರು.

ADVERTISEMENT

ಈ ಸಂಧರ್ಭದಲ್ಲಿ ಗ್ರಾಮದ ಮುಖಂಡರಾದ ಮನೋಹರರೆಡ್ಡಿ, ನಾಗೇಶ್, ರಾಜಾರೆಡ್ಡಿ, ಗುಂಜೂರು ರಾಮಕೃಷ್ಣಪ್ಪ, ಕಿಶೋರ್ ಕುಮಾರ್ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.