ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಮೀಕ್ಷೆ ಆಧರಿಸಿ ಕ್ಷೇತ್ರ ಆಯ್ಕೆ ಬಗ್ಗೆ ತೀರ್ಮಾನಿಸಬಾರದು ಎಂದು ಕಾಂಗ್ರೆಸ್ ಮುಖಂಡ ಬಿ.ಎಲ್.ಶಂಕರ್ ಹೇಳಿದರು.
ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯ ಮತ್ತು ಭಾರತ ಯಾತ್ರಾ ಕೇಂದ್ರ ಆಯೋಜಿಸಿದ್ದ ಲೋಹಿಯಾ ದಿನಾಚರಣೆ, ಪುಸ್ತಕ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು 45 ವರ್ಷ ಗಳಿಂದ ರಾಜಕಾರಣದಲ್ಲಿ ಇದ್ದಾರೆ. ಹಾದಿ ಬೀದಿಯಲ್ಲಿ ಜನರನ್ನು ಮಾತನಾ
ಡಿಸಿ ಕೊಟ್ಟ ವರದಿಯನ್ನು ನೋಡಿ ಸಿದ್ದರಾಮಯ್ಯ ಅವರಂತ ರಾಜಕಾರಣಿಗಳ ಬಗ್ಗೆ ತೀರ್ಮಾನಕ್ಕೆ ಬರಬಾರದು. ಚುನಾವಣಾ ತಂತ್ರಗಾರಿಕೆ ಅಧಿಕವಾಗುತ್ತಿದೆ. ಆದರ್ಶ ವ್ಯಕ್ತಿಗಳನ್ನು ಕರೆಸಿ ಚುನಾವಣಾ ಭಾಷಣ ಮಾಡಿಸಿತ್ತಿದ್ದ ಕಾಲವಿತ್ತು. ಈಗ ತಂತ್ರಗಾರಿಕೆಗೆ ಬೇಡಿಕೆ ಬಂದಿರುವ ಕಾಲದಲ್ಲಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ವೈ.ಎಸ್.ವಿ.ದತ್ತ ಮಾತನಾಡಿ, ‘ಒಂದೇ ದೇಶ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಕಾನೂನು ಅತ್ಯಂತ ಅಪಾಯಕಾರಿ. ಇದು ಮುಂದುವರಿದರೆ ಒಂದೇ ದೇಶ, ಒಂದೇ ಪಕ್ಷ, ಒಬ್ಬನೇ ವ್ಯಕ್ತಿ ಆಡಳಿತ ನಡೆಸುವ ಅಪಾಯವಿದೆ. ಇದರ ವಿರುದ್ಧ ಜನ ಧೈರ್ಯವಾಗಿ ಮಾತನಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.