ಬೆಂಗಳೂರು: ‘ಸಂಕಷ್ಟಗಳ ನಡುವೆಯೂ ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ಗುಣಮಟ್ಟದ ರೇಷ್ಮೆ ಮಾರಾಟಕ್ಕೆ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯಿಂದ ನೂತನ ಯೋಜನೆ ತರುವ ಚಿಂತನೆ ಇದೆ’ ಎಂದು ಮಂಡಳಿಯ ಅಧ್ಯಕ್ಷೆಸವಿತಾ ವಿ.ಅಮರಶೆಟ್ಟಿ ತಿಳಿಸಿದರು.
ಕಬ್ಬನ್‍ಪೇಟೆಯಲ್ಲಿರುವ ನಿಗಮದ ಕಚೇರಿ, ಕೇಂದ್ರ ಉಗ್ರಾಣಕ್ಕೆ ಶುಕ್ರವಾರ ಭೇಟಿ ನೀಡಿದ ಅವರು, ಅಲ್ಲಿನ ಸಿಬ್ಬಂದಿ ಹಾಗೂ ರೇಷ್ಮೆ ವರ್ತಕರೊಂದಿಗೆ ಚರ್ಚೆ ನಡೆಸಿದರು.
‘ರಾಜ್ಯದ ರೇಷ್ಮೆ ಉತ್ಪಾದನೆ ವಿಶ್ವವಿಖ್ಯಾತಿ ಪಡೆದಿದೆ. ಗುಣಮಟ್ಟದ ರೇಷ್ಮೆ ತಯಾರಿಯಲ್ಲೂ ಮುಂಚೂಣಿಯಲ್ಲಿದೆ.ರೇಷ್ಮೆ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಮಂಡಳಿ ಹಲವು ನೂತನ ಯೋಜನೆಗಳನ್ನು ಜಾರಿ ಮಾಡಲು ಚಿಂತನೆ ನಡೆಸುತ್ತಿದೆ’ ಎಂದರು.
‘ಗುಣಮಟ್ಟದ ರೇಷ್ಮೆಗೆ ವ್ಯಾಪಕ ಬೇಡಿಕೆಯಿದೆ. ರೇಷ್ಮೆ ಬೆಳೆಗಾರರ ಆದಾಯ ದ್ವಿಗುಣಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸು ಸಾಕಾರಗೊಳ್ಳುವತ್ತ ಮಂಡಳಿ ಹೆಜ್ಜೆ ಇಟ್ಟಿದೆ’ ಎಂದು ಹೇಳಿದರು.
‘ಸರಿಯಾದ ಸಮಯಕ್ಕೆ ಕಚೇರಿಗಳಿಗೆ ಬಂದು, ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು.ಮಾರುಕಟ್ಟೆ ದರದಲ್ಲಿ ರೇಷ್ಮೆಯನ್ನು ಮಾರಾಟ ಮಾಡಬೇಕು’ ಎಂದೂ ಸಿಬ್ಬಂದಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.