ಬೆಂಗಳೂರು: ಚರ್ಮರೋಗ ಸಮಸ್ಯೆಗಳಿಗೆ ಸಂಬಂಧಿಸಿದಂತೆಒಂದೇ ಕಡೆ ಚಿಕಿತ್ಸೆ ನೀಡುವ ‘ಎಪಿಕೋರಿಯಮ್’ ಚಿಕಿತ್ಸಾಲಯಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಚರ್ಮರೋಗ ತಜ್ಞಡಾ. ಬಿ.ಎಸ್. ಚಂದ್ರಶೇಖರ್ ಮತ್ತು ಉದ್ಯಮಿ ಇಲೇಶ್ ಖಬ್ಬರ್ ಈ ಚಿಕಿತ್ಸಾಲಯವನ್ನು ನಗರದ ಎಚ್.ಎಸ್.ಆರ್. ಬಡಾವಣೆಯಲ್ಲಿ ಪ್ರಾರಂಭಿಸಿದ್ದಾರೆ.
‘ವಾತಾವರಣದಲ್ಲಿ ಬದಲಾವಣೆ ಸೇರಿ ವಿವಿಧ ಕಾರಣಗಳಿಂದ ಚರ್ಮರೋಗ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ದೂಳು ಮತ್ತು ಶುಷ್ಕತೆಯಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತಿದೆ.ಚರ್ಮರೋಗಗಳನ್ನು ಕಡೆಗಣಿಸಬಾರದು. ಚರ್ಮ ಸಂಬಂಧಿ ಸಮಸ್ಯೆಗಳಿಗೆ ಒಂದೇ ಕಡೆ ಚಿಕಿತ್ಸೆ ದೊರೆಯುವುದರಿಂದ ಜನರು ಆಸ್ಪತ್ರೆಗಳಿಗೆ ಅಲೆದಾಡುವುದು ತಪ್ಪಲಿದೆ’ ಎಂದು ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
‘ಈ ಕೇಂದ್ರದಲ್ಲಿ ಮೊಡವೆ, ಸೋರಿಯಾಸಿಸ್, ಶಿಲೀಂಧ್ರ ಸೋಂಕು, ಚರ್ಮದ ಅಲರ್ಜಿ, ಕೂದಲು ಸಂಬಂಧಿ ಸಮಸ್ಯೆ ಸೇರಿ ವಿವಿಧ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದೆ’ ಎಂದು ಡಾ. ಬಿ.ಎಸ್. ಚಂದ್ರಶೇಖರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.