ಬೆಂಗಳೂರು: ಶಿಕ್ಷಣವು ಅನ್ನ ಗಳಿಕೆಯ ಮಾರ್ಗವಾದರೆ, ಸಾಂಸ್ಕೃತಿಕ ಚಟುವಟಿಕೆಗಳು ಹೃದಯವನ್ನು ಅರಳಿಸಿ ಅಂತರಂಗದ ವ್ಯಕ್ವಿತ್ತದ ವಿಕಾಸಕ್ಕೆ ಕಾರಣವಾಗುತ್ತದೆ ಎಂದು ಕತೆಗಾರ ಪ್ರೊ.ನಾಗರಾಜ ವಸ್ತಾರೆ ಹೇಳಿದರು.
ನಗರದ ಸೌಂದರ್ಯ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಸೌಂದರ್ಯ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ‘ವ್ಯಾವಹಾರಿಕ ಸೌಕರ್ಯಕ್ಕಾಗಿ ಇಂಗ್ಲಿಷ್ ಅನಿವಾರ್ಯ. ನಮ್ಮ ಭಾವನೆ, ಸೃಜನಶೀಲ ಅಭಿವ್ಯಕ್ತಿಗಾಗಿ ಮಾತೃಭಾಷೆ ಕನ್ನಡವೇ ಮೂಲ ಸೆಲೆ’ ಎಂದು ವಸ್ತಾರೆ ಪ್ರತಿಪಾದಿಸಿದರು.
ಸೌಂದರ್ಯ ಎಜುಕೇಷನ್ ಟ್ರಸ್ಟ್‌ನ ಕಾರ್ಯನಿರ್ವಹಣಾಧಿಕಾರಿ ಕೀರ್ತನ್‌ಕುಮಾರ್, ಪ್ರಾಂಶುಪಾಲ ಡಾ.ಸುರೇಶ್ ಸಿ ಹೆಗಡಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪ್ರಹ್ಲಾದ ರೆಡ್ಡಿ ಮುಂತಾದವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.