ADVERTISEMENT

ನೈರುತ್ಯ ರೈಲ್ವೆ–ಜೆಎಸ್‌ಡಬ್ಲ್ಯು ಮಿನರಲ್ಸ್ ರೈಲ್ ಲಾಜಿಸ್ಟಿಕ್ಸ್ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
<div class="paragraphs"><p>ರೈಲು ಸೇವೆ</p></div>

ರೈಲು ಸೇವೆ

   

–ಸಾಂದರ್ಭಿಕ ಚಿತ್ರ

ಬೆಂಗಳೂರು: ಕಬ್ಬಿಣದ ಅದಿರು ಸಾಗಣೆಗೆ 5 ಬಾಬ್‌ಸನ್ಸ್‌ (ಸೈಡ್‌ ಅನ್‌ಲೋಡ್‌ ಸಿಸ್ಟಂ ಇರುವ ವ್ಯಾಗನ್‌) ರೇಕ್‌ಗಳ ಕಾರ್ಯಾಚರಣೆಗಾಗಿ ನೈರುತ್ಯ ರೈಲ್ವೆ ಮತ್ತು ಜೆಎಸ್‌ಡಬ್ಲ್ಯು ಮಿನರಲ್ಸ್ ರೈಲ್ ಲಾಜಿಸ್ಟಿಕ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ.

ADVERTISEMENT

ಬೋಗಿಗಳ ಎರಡೂ ಬದಿಗಳಲ್ಲಿ ಅನ್‌ಲೋಡ್‌ ಮಾಡುವ ವ್ಯವಸ್ಥೆ ಇರುವ ಈ ರೇಕ್‌ಗಳು ಮಿನರಲ್ ಎಂಟರ್‌ಪ್ರೈಸಸ್‌ನ ಸೈಡಿಂಗ್, ಸಾಸಲು ಮತ್ತು ಸ್ವಾಮಿಹಳ್ಳಿಯಲ್ಲಿರುವ ಗಣಿಗಳಿಂದ ತೋರಣಗಲ್ಲು ಜೆಎಸ್‌ಡಬ್ಲ್ಯು ಉಕ್ಕಿನ ಪ್ಲಾಂಟ್‌ಗೆ ಅದಿರು ಸಾಗಿಸಲು ಬಳಕೆಯಾಗಲಿವೆ.

ಪ್ರತಿ ರೇಕ್‌ಗೆ ₹ 29.57 ಕೋಟಿ ಹೂಡಿಕೆ ಮಾಡಿದೆ. ಬಾಕ್ಸಿನ್‌ ರೇಕ್‌ಗಳಿಗಿಂತ ಶೇ 3.5 ಅಧಿಕ ಅದಿರು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅದಿರು ಇಳಿಸುವ (ಅನ್‌ಲೋಡ್‌) ಅವಧಿಯು ಬಾಕ್ಸಿನ್‌ ರೇಕ್‌ಗಿಂತ ಎರಡು ತಾಸು ಕಡಿಮೆ ಸಾಕಾಗುತ್ತದೆ. 

ಈ ಒಪ್ಪಂದಕ್ಕೆ ನೈರುತ್ಯ ರೈಲ್ವೆಯ ಸರಕು ಮಾರುಕಟ್ಟೆ ವಾಣಿಜ್ಯ ವ್ಯವಸ್ಥಾಪಕ ಎ. ಸುಂದರ್‌, ಜೆಎಸ್‌ಡಬ್ಲ್ಯು ಮಿನರಲ್ಸ್ ರೈಲ್ ಲಾಜಿಸ್ಟಿಕ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸುಶೀಲ್‌ ನೋವಾಲ್ ಸಹಿ ಹಾಕಿದರು. ನೈರುತ್ಯ ರೈಲ್ವೆ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಸತ್ಯಪ್ರಕಾಶ್‌ ಶಾಸ್ತ್ರಿ, ಉಪ ವಾಣಿಜ್ಯ ವ್ಯವಸ್ಥಾಪಕ ಅರವಿಂದ ಹೆರ್ಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.