ಬೆಂಗಳೂರು: ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯರನ್ನು ನಮ್ಮ ನೆಲದಿಂದಲೇ ಕೊಂಡೊಯ್ಯುವ ತರಬೇತಿಯ ಪ್ರಥಮ ಹಂತ ಕೊನೆಗೊಂಡಿದ್ದು, ಶೀಘ್ರ ಅಂತಿಮ ಮೂವರು ಗಗನಯಾನಿಗಳ ಆಯ್ಕೆ ನಡೆಯಲಿದೆ.
‘ಒಟ್ಟು 16 ಪರೀಕ್ಷೆಗಳನ್ನು ನಡೆಸಬೇಕಿದ್ದು, ಇದೀಗ ಒಂದು ಪರೀಕ್ಷೆ ಕೊನೆಗೊಂಡಿದೆ. ಗಗನಯಾನದ ಮುಂದಿನ ಪರೀಕ್ಷಾ ಹಂತಗಳು ಇನ್ನಷ್ಟು ಕಠಿಣವಾಗಿರುತ್ತದೆ’ ಎಂದು ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಏವಿಯೇಷನ್ ಮೆಡಿಸಿನ್‌ನ (ಐಐಎಎಂ) ಕಮಾಂಡೆಂಟ್ ಕಮಾಡೋರ್ ಅನುಪಮ್ ಅಗರ್‌ವಾಲ್ ಹೇಳಿದರು.
ಇಲ್ಲಿ ಗುರುವಾರ ನಡೆದ ಇನ್‌ಸ್ಟಿಟ್ಯೂಟ್‌ಸೊಸೈಟಿ ಆಫ್ ಏರೋಸ್ಪೇಸ್ ಮೆಡಿಸಿನ್‌ನ (ಐಎಸ್‌ಎಎಂ) 58ನೇ ವಾರ್ಷಿಕ ಸಮಾವೇಶದಲ್ಲಿ ತಿಳಿಸಿದರು.
‘ವ್ಯೋಮನೌಕೆಯಲ್ಲಿ ಕುಳಿತುಕೊಳ್ಳುವ ಮ್ಯಾಡ್ಯುಲ್ ವ್ಯವಸ್ಥೆ, ಜೀವ ರಕ್ಷಕ ವ್ಯವಸ್ಥೆಯ ವಿನ್ಯಾಸ, ಯಾನಕ್ಕೆ ಸಂಬಂಧಿಸಿದ ತರಬೇತಿಗಳು ಮೊದಲ ಹಂತದಲ್ಲಿರುತ್ತವೆ’ ಎಂದು ವಾಯುಪಡೆಯ ವೈದ್ಯಕೀಯ ಸೇವೆಗಳ ಮಹಾನಿರ್ದೇಶಕ ಏರ್‌ಮಾರ್ಷಲ್ ಎಂ.ಎಸ್.ಬುಟೋಲಾ ಹೇಳಿದರು.
‘ಆರಂಭದಲ್ಲಿ 60 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ವಿವಿಧ ತರದೈಹಿಕ ಅರ್ಹತೆಗಳನ್ನು ಪರಿಶೀಲಿಸಿದ ಬಳಿಕ ಇದೀಗ ಕೇವಲ 12 ಮಂದಿಯನ್ನು ಅಂತಿಮ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ. ಇವರಲ್ಲಿ ಮೊದಲ ತಂಡನ್ನು ಇದೀಗ ರಷ್ಯಾಕ್ಕೆ ತರಬೇತಿಗಾಗಿ ಕಳುಹಿಸಲಾಗಿದ್ದು, ಶೀಘ್ರ ವಾಪಸಾಗಲಿದ್ದಾರೆ. ಬಳಿಕ ಇನ್ನೊಂದು ತಂಡ ರಷ್ಯಾಕ್ಕೆ ತೆರಳಲಿದೆ. ಅಂತಿಮವಾಗಿ ಮೂವರನ್ನು ಗಗನಯಾನಕ್ಕೆ ಆಯ್ಕೆ ಮಾಡಲಾಗುತ್ತದೆ’ ಎಂದು ಅಗರ್‌ವಾಲ್ ವಿವರಿಸಿದರು.
ಸ್ರೊ ಮತ್ತು ದೇಶದ ಬಾಹ್ಯಾಕಾಶ ವೈದ್ಯಕೀಯ ಸಮುದಾಯ ಇದೀಗ ಗಗನಯಾನಸಿದ್ಧತೆಯಲ್ಲಿ ತೊಡಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.