ADVERTISEMENT

ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಅಂಚೆ ಪತ್ರಗಳಿಗೆ ವಿಶೇಷ ಚಿತ್ರದ ಮುದ್ರೆ

7ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 20:53 IST
Last Updated 18 ಜೂನ್ 2021, 20:53 IST

ಬೆಂಗಳೂರು: ಭಾರತೀಯ ಅಂಚೆ ಇಲಾಖೆಯು 7ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅವಿಸ್ಮರಣೀಯಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ದೇಶದಾದ್ಯಂತ ಒಟ್ಟು 810 ಪ್ರಧಾನ ಅಂಚೆ ಕಚೇರಿಗಳಲ್ಲಿ ಇದೇ21ರಂದು ಅಂಚೆ ಚೀಟಿಗಳ ಮುದ್ರೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಬೆಂಗಳೂರಿನ ಎಚ್‌ಎಎಲ್‌ 2ನೇ ಹಂತ ಹಾಗೂ ಆರ್‌.ಟಿ. ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಗಳಲ್ಲಿ ಈ ಸೌಲಭ್ಯ ಲಭ್ಯವಿದೆ.

‘ಯೋಗ ದಿನದ ಅಂಗವಾಗಿ ಅಂಚೆ ಕಚೇರಿಯಿಂದ ಬಟವಾಡೆಯಾಗುವ ಎಲ್ಲಾ ಲಕೋಟೆಗಳ ಮೇಲೆ ಯೋಗ ಮುದ್ರೆಯ ವಿಶೇಷ ಸ್ಟಾಂಪ್‌ ಹಾಕಲಾಗುತ್ತದೆ. ಮುದ್ರೆಯು ಎಚ್‌ಎಎಲ್‌ 2ನೇ ಹಂತ ಹಾಗೂ
ಆರ್‌.ಟಿ.ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಗಳ ಹೆಸರು ಮತ್ತು ಪಿನ್‌ಕೋಡ್‌ ಗಳನ್ನು ಒಳಗೊಂಡಿರಲಿದೆ. ಇದು ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿರಲಿದೆ. ಸಾರ್ವಜನಿಕರು, ಅಂಚೆಚೀಟಿ ಸಂಗ್ರಹ ಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.