ಬೆಂಗಳೂರು: ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚರಿಸಲಿದೆ.
ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ (ಎಸ್ಎಂವಿಟಿ) ರೈಲು ಜುಲೈ 19ರಂದು ರಾತ್ರಿ 8ಕ್ಕೆ ಹೊರಟು, ಮರುದಿನ ಬೆಳಿಗ್ಗೆ 7.45ಕ್ಕೆ ಕಲಬುರಗಿ ನಿಲ್ದಾಣ ತಲುಪಲಿದೆ.
ಜುಲೈ 20 ರಂದು ಬೆಳಿಗ್ಗೆ 9.30ಕ್ಕೆ ಕಲಬುರಗಿ ನಿಲ್ದಾಣದಿಂದ ಹೊರಟು, ಅದೇ ದಿನ ರಾತ್ರಿ 8.30ಕ್ಕೆ ಎಸ್ಎಂವಿಟಿ ಬೆಂಗಳೂರಿಗೆ ತಲುಪಲಿದೆ.
ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರು, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಎಸಿ ಟು ಟೈಯರ್-1, ಎಸಿ ತ್ರೀ ಟೈಯರ್-1, ಸ್ಲೀಪರ್ ಕ್ಲಾಸ್-10, ಜನರಲ್ ಸೆಕೆಂಡ್ ಕ್ಲಾಸ್-4 ಮತ್ತು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್/ದಿವ್ಯಾಂಗ್ ಸ್ನೇಹಿ ಬೋಗಿ-2 ಸೇರಿದಂತೆ ಒಟ್ಟು 18 ಬೋಗಿಗಳು ಒಳಗೊಂಡಿದೆ ಎಂದು ನೈರುತ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.