ಬೆಂಗಳೂರು: ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ದಾನಪುರದ ವಿಶೇಷ ರೈಲುಗಳ ಸಂಚಾರವನ್ನು ಮತ್ತೆರಡು ವಾರ ವಿಸ್ತರಿಸಲು ರೈಲ್ವೆ ನಿರ್ಧರಿಸಿದೆ.
ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್– ಬಿಹಾರದ ದಾನಪುರ ನಡುವೆ ವಾರಕ್ಕೊಮ್ಮೆ ಸಂಚರಿಸುವ ಎಂಟು ರೈಲುಗಳು ಆಗಸ್ಟ್ 28ರಿಂದ ಸೆಪ್ಟೆಂಬರ್ 7ರವರೆಗೆ ಒಟ್ಟು 14 ಟ್ರಿಪ್ಗಳನ್ನು ನಡೆಸಲಿವೆ. ಅದೇ ರೀತಿ ವಾರಕ್ಕೆ ಎರಡು ಬಾರಿ ಸಂಚರಿಸುವ ಎರಡು ರೈಲುಗಳು ತಲಾ ಎರಡು ಬಾರಿ ಹೆಚ್ಚುವರಿಯಾಗಿ ಸಂಚರಿಸಲಿವೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.