ADVERTISEMENT

ಶಬರಿಮಲೆ ಯಾತ್ರಿಕರ ಅನುಕೂಲಕ್ಕಾಗಿ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:17 IST
Last Updated 10 ನವೆಂಬರ್ 2024, 16:17 IST
   

ಬೆಂಗಳೂರು: ಶಬರಿಮಲೆ ಯಾತ್ರಿಕರಿಗೆ ಅನುಕೂಲ ಆಗುವಂತೆ ಕೊಚುವೇಲಿ–ಬೆಂಗಳೂರು ಎಸ್‌ಎಂವಿಟಿ ನಡುವೆ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ. ಎರಡೂ ಕಡೆಯಿಂದ ತಲಾ 12 ಟ್ರಿಪ್‌ ಇರಲಿವೆ.

ನವೆಂಬರ್‌ 12ರಿಂದ ಜನವರಿ 28ರವರೆಗೆ ಪ್ರತಿ ಮಂಗಳವಾರ ಸಂಜೆ 6.05ಕ್ಕೆ  ಕೊಚುವೇಲಿಯಿಂದ ರೈಲು ಹೊರಡಲಿದ್ದು, ಮರುದಿನ ಬೆಳಿಗ್ಗೆ 10.55ಕ್ಕೆ ಎಸ್‌ಎಂವಿಟಿಗೆ ತಲುಪಲಿದೆ. ನ.13 ರಿಂದ ಜ.29ರವರೆಗೆ ಪ್ರತಿ ಬುಧವಾರ ಮಧ್ಯಾಹ್ನ 12.45ಕ್ಕೆ ಬೆಂಗಳೂರು ಎಸ್‌ಎಂವಿಟಿಯಿಂದ ಹೊರಟು ಮರುದಿನ ಬೆಳಿಗ್ಗೆ 6.45ಕ್ಕೆ ಕೊಚುವೇಲಿ ತಲುಪಲಿದೆ.

ಪ್ರಯಾಣಿಕರು ಅಧಿಕೃತ ವೆಬ್‌ಸೈಟ್‌: www.enquiry.indianrail.gov.inಗೆ ಭೇಟಿ ನೀಡಿ, ಎನ್‌ಟಿಇಎಸ್‌ ಅಪ್ಲಿಕೇಶನ್ ಬಳಸಿ ಅಥವಾ 139ಕ್ಕೆ ಡಯಲ್ ಮಾಡುವ ಮೂಲಕ ಈ ರೈಲುಗಳ ಸಮಯವನ್ನು ಪರಿಶೀಲಿಸಬಹುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.