ADVERTISEMENT

ಕ್ರೀಡೆಗೆ ಅಂಗವೈಕಲ್ಯ ಅಡ್ಡಿಯಾಗದು: ಗೋಪಿನಾಥ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 15:32 IST
Last Updated 24 ನವೆಂಬರ್ 2024, 15:32 IST
ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಆಟಗಾರ ಕೆ.ಗೋಪಿನಾಥ್ ಅವರು ಪದಕ ವಿತರಿಸಿ ಗೌರವಿಸಿದರು 
ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಆಟಗಾರ ಕೆ.ಗೋಪಿನಾಥ್ ಅವರು ಪದಕ ವಿತರಿಸಿ ಗೌರವಿಸಿದರು    

ಕೆ.ಆರ್.ಪುರ: ‘ಕ್ರೀಡೆಗೆ ಅಂಗವೈಕಲ್ಯ ಅಡ್ಡಿಯಾಗದು ಎನ್ನುವುದಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ಈವರೆಗೆ ಭಾರತ 29 ಪದಕಗಳನ್ನು ಪಡೆದಿರುವುದೇ ಸಾಕ್ಷಿ’ ಎಂದು ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್ ಆಟಗಾರ ಕೆ.ಗೋಪಿನಾಥ್ ಹೇಳಿದರು.

ಕೆ.ಆರ್.ಪುರ ಸಮೀಪದ ಐಟಿಐನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶ್ರೀ ವೆಂಕಟೇಶ್ವರ ಸಮೂಹ ವಿದ್ಯಾಸಂಸ್ಥೆಗಳ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯುಸಿ ವಿಭಾಗದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ಭಾರತಕ್ಕೆ ಗೆಲುವು ತಂದಿದ್ದೇನೆ. ನನಗೆ ಇಲ್ಲಿಯವರೆಗೆ ಅಂಗವೈಕಲ್ಯ ಎನ್ನುವುದು ಯಾವುದೇ ರೀತಿಯಲ್ಲೂ ಕಾಡಿಲ್ಲ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಹಲವರು ವಿವಿಧ ಸಮಸ್ಯೆಗಳಿಗೆ ತುತ್ತಾಗಿರುತ್ತಾರೆ. ಅವರೂ ಅಂಗವೈಕಲ್ಯದ ಕಡೆಗೆ ಗಮನಹರಿಸದೆ ಕ್ರೀಡೆಗೆ ಒತ್ತು ನೀಡಿದ್ದಾರೆ’ ಎಂದರು.

ADVERTISEMENT

ಕೋಲಾರ ಜಿಲ್ಲೆಯ ಯುವ ಸಬಲೀಕರಣ ಕ್ರೀಡಾ ಇಲಾಖೆಯ ನಿರ್ದೇಶಕ ಎಂ.ವೆಂಕಟೇಶ್ ಮಾತನಾಡಿದರು.

ವಾಲಿಬಾಲ್, ಥ್ರೋಬಾಲ್, ಲಾಂಗ್‌ ಜಂಪ್, ಹೈ ಜಂಪ್‌, ಷಾಟ್‌ಪಟ್‌, 100, 200 ಮೀಟರ್ ಓಟ, ರಿಲೇ ಓಟದಲ್ಲಿ ಜಯಗಳಿಸಿದ ಮಕ್ಕಳು ಬಹುಮಾನ ಪಡೆದುಕೊಂಡರು.

ಈ ಸಂದರ್ಭದಲ್ಲಿ ದಕ್ಷಿಣ ವಲಯ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಎಂ.ತಿಮ್ಮಾರೆಡ್ಡಿ, ಶ್ರೀವೆಂಕಟೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ವಿ.ಮುನಿಸ್ವಾಮಿ, ಅಥ್ಲೆಟಿಕ್ ಆಟಗಾರ ಸುರೇಶ್, ನಿರ್ದೇಶಕ ಪ್ರೊ.ವಿ.ಎಂ.ರವಿ, ಪುಟ್ಟರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.