ADVERTISEMENT

‘ಆಡುಭಾಷೆಯಾಗಿ ಸಂಸ್ಕೃತ ಬೆಳೆಯಲಿ’

ರಾಜ್ಯಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 23:14 IST
Last Updated 23 ಜನವರಿ 2020, 23:14 IST
ಕಾರ್ಯಕ್ರಮದಲ್ಲಿ ಸಂಸ್ಕೃತ ಪಾಠಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಸ್ಕೃತ ಶಿಕ್ಷಕ ಎಂ. ಮಂಜುನಾಥ್, ಸಂಸ್ಕೃತ ವಿದ್ವಾಂಸ ಡಾ.ಸಿ ನಂಜುಂಡಯ್ಯ, ಪ್ರೊ.ವಿ. ಗಿರೀಶ್ ಚಂದ್ರ, ಶಿವಗಂಗಾ ಕ್ಷೇತ್ರದ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಗುತ್ತಿಗೆದಾರ ಕೃಷ್ಣಪ್ಪ, ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ದೇವಾಲಯಗಳ ಅರ್ಚಕರ ಹಾಗೂ ಆಗಮಿಕರ ಸಂಘದ ರಾಜ್ಯಾಧ್ಯಕ್ಷ ಉ.ವೇ. ಡಾ.ಜಾನಕಿರಾಂ ಮತ್ತು ಪಿ.ಆರ್. ಪಾಗೋಜಿ ಇದ್ದರು  –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಂಸ್ಕೃತ ಆಡುಭಾಷೆಯಾಗಿ ಬೆಳೆಯಬೇಕು. ಹೀಗಾದರೆ ಮಾತ್ರ ಈ ಭಾಷೆ ಜೀವಂತವಾಗಿ ಉಳಿಯಲು ಸಾಧ್ಯ. ಸಂಸ್ಕೃತ ಭಾಷೆಯ ಅಳಿವು-ಉಳಿವು ಶಿಕ್ಷಕರ ಕೈಯಲ್ಲಿದೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ. ಗಿರೀಶ್‌ ಚಂದ್ರ ಹೇಳಿದರು.

ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘ ಗುರುವಾರ ಹಮ್ಮಿಕೊಂಡಿದ್ದರಾಜ್ಯಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಸಂಸ್ಕೃತಪಾಠಶಾಲೆಗಳು ಮಾದರಿ ಶಾಲೆಗಳಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ವಲಯ ಸಂಯೋಜಕರು ಶಾಲೆಗಳ ಪ್ರಗತಿಯ ಬಗ್ಗೆ ವಸ್ತುನಿಷ್ಠ ವರದಿ ನೀಡಬೇಕು’ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಪ್ರಕಾಶ ಆರ್.ಪಾಗೋಜಿ, ‘ಸಂಸ್ಕೃತಭಾಷೆಯನ್ನು ಗ್ರಾಮೀಣ ಮಟ್ಟದಲ್ಲಿ ಪಸರಿಸುವ ನಿಟ್ಟಿನಲ್ಲಿಹಳ್ಳಿಗಳಲ್ಲಿ ‘ಸಂಸ್ಕೃತ ಭಾಷಾ ಶಿಬಿರ’ ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ಕೆನಿವೃತ್ತ ಶಿಕ್ಷಕರನ್ನು ಬಳಸಲಾಗುವುದು. ಪ್ರತಿ ಶಾಲೆಗಳಲ್ಲಿ ‘ಸಂಸ್ಕೃತಸಂಭಾಷಣೆ' ಕಾರ್ಯಕ್ರಮ ಆರಂಭಿಸಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.