ADVERTISEMENT

ಕಾದು ಸುಸ್ತಾದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 19:17 IST
Last Updated 6 ಜುಲೈ 2020, 19:17 IST

ಬೆಂಗಳೂರು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ವತಿಯಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಪಾಠಗಳು ಪ್ರಸಾರವಾಗುತ್ತವೆ ಎಂದು ನಂಬಿದ ಸಾವಿರಾರು ಮಂದಿ ಚಂದನದ ಮುಂದೆ ಕಾದುಕುಳಿತು ಸುಸ್ತಾದರು. ಆದರೆ, ಪಾಠವೇ ಬಿತ್ತರವಾಗಲಿಲ್ಲ.

ಸೋಮವಾರ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಗಣಿತ, 10ರಿಂದ ಇಂಗ್ಲಿಷ್, 10.30ರಿಂದ ವಿಜ್ಞಾನ.. ಹೀಗೆ ಸಂಜೆ 5 ಗಂಟೆಯವರೆಗೆ ಪಾಠ ನಡೆಯಲಿದೆ ಎಂದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿತ್ತು. ಇದು ರಾಜ್ಯವ್ಯಾಪಿ ಶಾಲೆಗಳಿಗೆ ತಲುಪಿ, ಪೋಷಕರನ್ನೂ ತಲುಪಿತ್ತು. ಆದರೆ ಬೆಳಿಗ್ಗೆ 9.30 ಕಳೆದರೂ ಪಾಠಗಳ ಪ್ರಸಾರ ಆರಂಭವಾಗಲಿಲ್ಲ.

‘ಕಾರ್ಯಕ್ರಮದ ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಶಿಕ್ಷಣ ಇಲಾಖೆ ಒಪ್ಪಿಗೆ ಪಡೆದಿರಲಿಲ್ಲ, ಅಷ್ಟರಲ್ಲೇ ಯಾರೋ ವೇಳಾಪಟ್ಟಿಯನ್ನು ಯೂಟ್ಯೂಬ್‌ಗೆ ಹಾಕಿದ್ದರಿಂದ ಗೊಂದಲ ಉಂಟಾಗಿದೆ’ ಎಂದು ಡಿಎಸ್‌ಇಆರ್‌ಟಿ ನಿರ್ದೇಶಕ ಎಂ.ಆರ್.ಮಾರುತಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.