ADVERTISEMENT

ಬೋಸ್‌ ಕಣ್ಮರೆಯಾದ ಇತಿಹಾಸ ಪುನರ್ ಪರಿಶೀಲನೆಯಾಗಲಿ: ಅನುಜ್‌ ಧರ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 21:49 IST
Last Updated 26 ಜೂನ್ 2022, 21:49 IST
ನಗರದ ದಿ ಮಿಥಿಕ್ ಸೊಸೈಟಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್–ಹೊಸ ಶೋಧದ ಅಂಶಗಳ ವಿಚಾರ ಸಂಕಿರಣದಲ್ಲಿ (ಎಡದಿಂದ) ಅನುಜ್ ಧರ್, ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ಪ್ರೊ. ಕೃ.ನರಹರಿ, ಲೇಖಕ ಚಂದ್ರಚೂಡ್ ಘೋಷ್, ಇತಿಹಾಸಕಾರ ಡಾ.ಜಿ. ಬಿ.ಹರೀಶ್ ಇದ್ದರು  –ಪ್ರಜಾವಾಣಿ ಚಿತ್ರ
ನಗರದ ದಿ ಮಿಥಿಕ್ ಸೊಸೈಟಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್–ಹೊಸ ಶೋಧದ ಅಂಶಗಳ ವಿಚಾರ ಸಂಕಿರಣದಲ್ಲಿ (ಎಡದಿಂದ) ಅನುಜ್ ಧರ್, ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ಪ್ರೊ. ಕೃ.ನರಹರಿ, ಲೇಖಕ ಚಂದ್ರಚೂಡ್ ಘೋಷ್, ಇತಿಹಾಸಕಾರ ಡಾ.ಜಿ. ಬಿ.ಹರೀಶ್ ಇದ್ದರು  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಅನೇಕ ರಾಜಕೀಯ ಕಾರಣಗಳಿಂದ ಸುಭಾಷ್‌ ಚಂದ್ರ ಬೋಸ್‌ರ ಜೀವನ ನಿಗೂಢವಾಗಿದೆ. ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ
ಎಂಬ ಸಾರ್ವಜನಿಕ ನಂಬಿಕೆ ಸತ್ಯವಲ್ಲ ಎಂದು ಸಂಶೋಧಕರಾದ ಅನುಜ್‌ ಧರ್‌ ಮತ್ತು ಚಂದ್ರಚೂಡ್ ಘೋಷ್‌ ಅಭಿಪ್ರಾಯ ವ್ಯಕ್ತಪಡಿಸಿದರು.

‘ಮಿಥಿಕ್ ಸೊಸೈಟಿಯಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ರ 125ನೇ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ‘ನೇತಾಜಿ ಸುಭಾಷ್‌ಚಂದ್ರ ಬೋಸ್‌–ಹೊಸ ಶೋಧದ ಅಂಶಗಳು’ ಎಂಬ ವಿಚಾರ
ಸಂಕಿರಣದಲ್ಲಿ ಮಾತನಾಡಿದರು. ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೇತಾಜಿ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರು 1945ರ ಅಗಸ್ಟ್‌ 18ರಂದು ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ಮರಣ ಹೊಂದಿದ್ದರು ಎನ್ನುವುದು ಕಟ್ಟು ಕಥೆ. ಸ್ವಾತಂತ್ರ್ಯಾ ನಂತರ 1985ರ ವರೆಗೂ ಗುಮ್ನಾಮಿ ಬಾಬಾ ಹೆಸರಿನಲ್ಲಿ ವೇಷ ಮರೆಸಿಕೊಂಡು ಅಯೋಧ್ಯದಲ್ಲಿ ಜೀವಿಸಿದ್ದರು ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ’ ಎಂದು ಮಾಹಿತಿ ನೀಡಿದರು.

‘ನೇತಾಜಿಯವರ ಜೀವನ ಮತ್ತು ಅವರು ಸ್ಥಾಪಿಸಿದ್ದ ಭಾರತೀಯ ರಾಷ್ಟ್ರೀಯ ಸೇನೆಗೆ ಸಂಬಂಧಿಸಿ 70,000ಕ್ಕೂ ಅಧಿಕ ಪುಟಗಳು
ಸರ್ಕಾರ ವಿವಿಧ ವಿಭಾಗಗಳಲ್ಲಿ ವಿಮೋಚನೆಗಾಗಿ ಕಾಯುತ್ತಿವೆ. ಈ ದಾಖಲೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿದರೆ ನೇತಾಜಿಯವರಿಗೆ ಸಂಬಂಧಿ
ಸಿದ ಅನೇಕ ವಿಷಯಗಳ ಸಂಶೋಧನೆಗೆ ಅನುಕೂಲವಾಗಲಿದೆ ಎಂದರು’.

ADVERTISEMENT

‘ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅಂತಹ ಮಹನೀಯರ ಸಾವಿನ ಕುರಿತು ತನಿಖೆ ಕೈಗೊಳ್ಳದೇ ಮುಚ್ಚಿಹಾಕಿದ್ದಾರೆ. ಅವರ ಡಿಎನ್‌ಎಯನ್ನು ವಿಧಿ ವಿಜ್ಞಾನ ಪರೀಕ್ಷೆಗೊಳಪಡಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ’ ಎಂದು ಆರೋಪಿಸಿದರು.

ಡಾ.ಜಿ.ಬಿ. ಹರೀಶ್ ಮಾತನಾಡಿದರು. ಮಿಥಿಕ್ ಸೊಸೈಟಿ ಅಧ್ಯಕ್ಷ ಪ್ರೊ.ಕೃ.ನರಹರಿ, ವಿ.ನಾಗರಾಜ್, ಎಸ್.ರವಿ, ಎಂ.ಆರ್.ಪ್ರಸನ್ನಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.