ADVERTISEMENT

ಬೆಂಗಳೂರು: ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ನವೆಂಬರ್ 2023, 7:58 IST
Last Updated 25 ನವೆಂಬರ್ 2023, 7:58 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ಬೆಂಗಳೂರು: ಹಿಂದುಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ (ಎಚ್‌ಎಎಲ್‌) ಸಂಪೂರ್ಣ ದೇಶೀಯ
ವಾಗಿ ನಿರ್ಮಿಸಿರುವ ಲಘು ಯುದ್ಧ ವಿಮಾನ ‘ತೇಜಸ್‌’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ 30 ನಿಮಿಷ ಹಾರಾಟ ನಡೆಸಿದರು.

ನಗರದಲ್ಲಿರುವ ‘ಏರ್‌ಕ್ರಾಫ್ಟ್‌ ಸಿಸ್ಟಮ್ಸ್‌ ಟೆಸ್ಟಿಂಗ್‌ ಸಂಸ್ಥೆ’ಯ ಆವರಣದಲ್ಲಿ ಅವಳಿ ಆಸನಗಳುಳ್ಳ ತೇಜಸ್‌ ತರಬೇತಿ ವಿಮಾನ ಏರಿದ ಪ್ರಧಾನಿ, ಅರ್ಧ ಗಂಟೆ ಹಾರಾಡಿದರು. ಈ ಅವಧಿಯಲ್ಲಿ ಎಚ್‌ಎಎಲ್‌ನ ಪೈಲಟ್‌ ತೇಜಸ್‌ನ ಸಾಮರ್ಥ್ಯವನ್ನು ಪ್ರಧಾನಿಗೆ ಪ್ರದರ್ಶಿಸಿದರು.

ADVERTISEMENT

‘ನರೇಂದ್ರ ಮೋದಿ ಅವರು ಯುದ್ಧ ವಿಮಾನವೊಂದರಲ್ಲಿ ಹಾರಾಟ ನಡೆಸಿದ ದೇಶದ ಮೊದಲ ಪ್ರಧಾನಿ’ ಎಂದು ವಾಯುಪಡೆ ಅಧಿಕಾರಿಗಳು ಹೇಳಿದ್ದಾರೆ. ‘ತೇಜಸ್‌ನಲ್ಲಿ ಹಾರಾಡಿದ ಅನುಭವ ಅವಿಸ್ಮರಣೀಯ’ ಎಂಬುದಾಗಿ ಪ್ರಧಾನಿ ಬಣ್ಣಿಸಿದ್ದಾರೆ ಎಂದೂ ಮಾಹಿತಿ ಹಂಚಿಕೊಂಡಿದ್ದಾರೆ.

ಇದು ಭಾರತವು ದೇಶೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ,
ತಯಾರಿಸಿದ ಮೊದಲ ಅವಳಿ ಆಸನಗಳ ಯುದ್ಧ ವಿಮಾನವಾಗಿದೆ. ಒಂದು ಆಸನವುಳ್ಳ ತೇಜಸ್‌ ಅನ್ನು ಲಘು ಯುದ್ಧ ವಿಮಾನವಾಗಿ ಮತ್ತು ಎರಡು ಆಸನವುಳ್ಳ ಇದೇ ವಿಮಾನವನ್ನು ತರಬೇತಿ ಯುದ್ಧ ವಿಮಾನವನ್ನಾಗಿ ಬಳಸಿಕೊಳ್ಳುವ ಯೋಜನೆ ಭಾರತೀಯ ವಾಯುಪಡೆಯ ಮುಂದಿದೆ.

2016ರಲ್ಲಿ ಮೊದಲ ತೇಜಸ್‌ ಯುದ್ಧ ವಿಮಾನ ವಾಯುಪಡೆಯನ್ನು ಸೇರಿಕೊಂಡಿತ್ತು. ನಂತರ ವಿವಿಧ ಹಂತಗಳಲ್ಲಿ ಹಲವು ವಿಮಾನಗಳು ವಾಯುಪಡೆ ಸೇರಿವೆ. 83 ತೇಜಸ್‌ ಲಘು ಯುದ್ಧ ವಿಮಾನಗಳ ಪೂರೈಕೆಗೆ ವಾಯುಪಡೆಯು ಎಚ್‌ಎಎಲ್‌ಗೆ ಕಾರ್ಯಾದೇಶ ನೀಡಿದೆ. 2024ರ ಫೆಬ್ರುವರಿಯಿಂದ ಈ ವಿಮಾನಗಳ ಪೂರೈಕೆ ಆರಂಭವಾಗುವ ನಿರೀಕ್ಷೆ ಇದೆ.

ಈಗ ಎಚ್‌ಎಎಲ್‌ ಪ್ರತಿ ವರ್ಷಕ್ಕೆ ಎಂಟು ಲಘು ಯುದ್ಧ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. 2025ರ ವೇಳೆಗೆ ಅದನ್ನು ಪ್ರತಿ ವರ್ಷಕ್ಕೆ 16 ಹಾಗೂ ನಂತರದ ಮೂರು ವರ್ಷಗಳಲ್ಲಿ ಪ್ರತಿ ವರ್ಷಕ್ಕೆ 24 ವಿಮಾನ ತಯಾರಿಗೆ ಹೆಚ್ಚಿಸುವ ಗುರಿ ಇದೆ ಎಂದು ವಾಯುಪಡೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.