ADVERTISEMENT

ಅಲಿ ಅಕ್ಬರ್‌ ಖಾನ್‌ ಶತಮಾನೋತ್ಸವ: ನಾಳೆ ‘ಸ್ವರ ಸಾಮ್ರಾಟ್‌ ಫೆಸ್ಟಿವಲ್‌’

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 20:43 IST
Last Updated 12 ಜನವರಿ 2023, 20:43 IST
ಅಲಿ ಅಕ್ಬರ್ ಖಾನ್
ಅಲಿ ಅಕ್ಬರ್ ಖಾನ್   

ಬೆಂಗಳೂರು: ಸ್ವರ ಸಾಮ್ರಾಟ್‌ ಉಸ್ತಾದ್ ಅಲಿ ಅಕ್ಬರ್‌ ಖಾನ್‌ ಅವರ ಶತಮಾನೋತ್ಸವದ ಅಂಗವಾಗಿ ಜ. 14 ಮತ್ತು 15ರಂದು ‘ಸ್ವರ ಸಾಮ್ರಾಟ್‌ ಫೆಸ್ಟಿವಲ್‌’ ಸಂಗೀತ ಕಾರ್ಯಕ್ರಮವು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆಯಲಿದೆ. ಶ್ರೀರಂಜನಿ ಫೌಂಡೇಷನ್‌ ಟ್ರಸ್ಟ್‌ ಕಾರ್ಯಕ್ರಮ ಆಯೋಜಿಸಿದೆ.

ಜ. 14ರಂದು ಹಿಂದೂಸ್ಥಾನಿ ಸಂಗೀತ ಗಾಯಕ ವೆಂಕಟೇಶ್‌ ಕುಮಾರ್ ಅವರ ಸಂಗೀತ ಕಛೇರಿಗೆ ರವೀಂದ್ರ ಯಾವಗಲ್ (ತಬಲಾ), ರವೀಂದ್ರ ಕಾಟೋಟಿ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ. ಸಿತಾರ್‌ ವಾದಕ ಪುರ್ಬಯನ್ ಚಟರ್ಜಿ, ಕರ್ನಾಟಕ ಕೊಳಲು ವಾದಕ ಶಶಾಂಕ್ ಸುಬ್ರಮಣ್ಯಂ, ತಬಲಾ ವಾದಕ ಓಜಸ್‌ ಅಧಿಯಾ ಮತ್ತು ಮೃದಂಗ ವಾದಕ ಪರುಪಳ್ಳಿ ಫಲ್ಗುಣ್ ನಡುವೆ ಜುಗಲ್‌ಬಂದಿ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸಂಗೀತ ಗಾಯಕ ಅಭಿಷೇಕ್ ರಘುರಾಮ್‌ ಅವರ ಸಂಗೀತ ಕಾರ್ಯಕ್ರಮಕ್ಕೆ ಸರೋದ್ ವಾದಕ ಸೌಗತ ರಾಯ್ ಚೌಧರಿ, ತಬಲಾ ವಾದಕ ಇಂದ್ರನಿಲ್ ಮಲ್ಲಿಕ್‌ ಸಾಥ್‌ ನೀಡಲಿದ್ದಾರೆ.

ಜ. 15ರಂದು ಮಾಳ್ವಿಕಾ ಸರುಕ್ಕೈ ಅವರು ಭರತನಾಟ್ಯ ಪ್ರಸ್ತುತ ಪಡಿಸಲಿದ್ದು, ಕರ್ನಾಟಕ ಶಾಸ್ತ್ರೀಯ ಗಾಯಕಿ ಬಾಂಬೆ ಜಯಶ್ರೀ ಅವರು ಕಾರ್ಯಕ್ರಮ ನೀಡಲಿದ್ದಾರೆ.

ADVERTISEMENT

ತಬಲಾ ವಾದಕ ಯೋಗೇಶ್ ಸಮ್ಸಿ, ಮೃದಂಗ ವಾದಕ ಪತ್ರಿ ಸತೀಶ್ ಕುಮಾರ್, ಘಟ ವಾದ್ಯದ ವಾದಕ ಗಿರಿಧರ್ ಉಡುಪ ಮತ್ತು ಮಿಲಿಂದ್ ಕುಲಕರ್ಣಿ ಅವರ ತಾಳವಾದ್ಯ ಇರಲಿದೆ.

ಹಿಂದೂಸ್ಥಾನಿ ಸಂಗೀತ ಗಾಯಕಿ ದೇಬಪ್ರಿಯಾ ಅಧಿಕಾರಿ ಅವರಿಗೆ ಸಿತಾರ್‌ ವಾದಕ ಸಮನ್ವಯ ಸರ್ಕಾರ್ ಮತ್ತು ರಾಜೇಂದ್ರ ನಾಕೋಡ್ ಸಾಥ್ ನೀಡಲಿದ್ದಾರೆ. ಎರಡೂ ದಿನ ಸಂಜೆ 4ಕ್ಕೆ ಸಂಗೀತ ಕಛೇರಿಗಳು ಪ್ರಾರಂಭವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.